ದಾವಣಗೆರೆ- ಅನ್ನಭಾಗ್ಯ ವಿಷಯದಲ್ಲಿ ರಾಜಕೀಯ ಜೋರಾಗಿದೆ. ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿದಕ್ಕೆ ಸಿದ್ದರಾಮಯ್ಯ ಅವರ ಅಪ್ಪನ ಮನೆಯಿಂದ ಕೊಡ್ತಾರಾ ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅನ್ನ ಭಾಗ್ಯ ಅಕ್ಕಿಯನ್ನು ನಿಲ್ಲಿಸಲಿದ್ದಾರೆ ಎಂದು ದಾವಣಗೆರೆಯಲ್ಲಿ ಮಾಜಿ ಸಿ ಎಮ್ ಸಿದ್ದರಾಮಯ್ಯಾ ಅವರು ಆರೋಪ ಮಾಡಿದ್ದರು. ‌ಇಲ್ಲಿ ಯಾರೂ ಅಕ್ಕಿಯನ್ನು ಅವರ ಅಪ್ಪನ‌ ಮನೆಯಿಂದ ಕೊಡ್ತಾ ಇಲ್ಲಾ, ಬಿಜೆಪಿ ಸರ್ಕಾರದ ಅನ್ನಭಾಗ್ಯವನ್ನು ಸಿದ್ದರಾಮಯ್ಯ ನಾವು ಕೊಟ್ವಿ ಎಂದು ಹೇಳುತ್ತಾರೆ.

ನಮ್ಮ ಯೋಜನೆಯ ಲಾಭ ಪಡೆದು ನಮ್ಮ ಬಗ್ಗೆಯೇ ಸಿದ್ದ ರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ, ಅನ್ನಭಾಗ್ಯ ಅಕ್ಕಿಯನ್ನು ಕೊಟ್ಟಿದ್ದು ಬಿಜೆಪಿ ಸರ್ಕಾರ ಕಾಂಗ್ರೆಸ್ ನದ್ದು ಅಲ್ಲ. ಕೋವಿಡ್ ಸಂದರ್ಭದಲ್ಲೂ ಸಿಎಂ ಖಜಾನೆಗೆ ಹಣ ತರುವ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ನಲ್ಲೂ ಸಂಕಷ್ಟದಲ್ಲಿರುವ ರೈತರು, ಅಸಂಘಟಿತ ಕಾರ್ಮಿಕರ ಕಷ್ಟಕ್ಕೆ ಸಿಎಂ ಸ್ಪಂಧಿಸಿ ಸಹಾಯ ಹಸ್ತ ಚಾಚಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದು ಟೀಕೆ ಮಾಡಲಿ ಬೇಡ ಎನ್ನುವುದಿಲ್ಲಾ. ಆದರೆ ಈ ರೀತಿ ಮಾತನಾಡುವುದು ತಪ್ಪು ಎಂದ ರೇಣುಕಾಚಾರ್ಯ ಹೇಳಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply