ಹೊಸಪೇಟೆ – ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣದ ಈಶ್ವರ ಆಲಯದಲ್ಲಿ ಮಾದಿಗ ಸಮುದಾಯದಿಂದ  ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ 21,000 ರೂ.ಗಳ ಚಕ್ ಅನ್ನು  ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಅವರ ಮೂಲಕ ಟ್ರೆಸ್ಟ್ಗೆ ನೀಡಲಾಯಿತು. 

ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಮುಖಂಡರಾದ ಶ್ರೀ ಶಿವರಾಮ, ಶ್ರೀ ಮಲ್ಲಿಕಾರ್ಜುನ, ವಿರೇಶ್ ಕುಮಾರ್, ಶ್ರೀ ಬಸಪ್ಪ, ಶ್ರೀ ಆನಂದ, ಶ್ರೀ ಯಲ್ಲಪ್ಪ, ಶ್ರೀ ಮೌನೇಶ, ಶ್ರೀ ಕಾಡಪ್ಪ, ಶ್ರೀ ವೆಂಕಟೇಶ್, ಶ್ರೀ ಬಿ ಹನಮಂತಪ್ಪ ಹಾಗೂ ಬಿಜೆಪಿ ಮಹಾ ಕೇಂದ್ರದ ಅಧ್ಯಕ್ಷರಾದ ಶ್ರೀ ಲಿಂಗಪ್ಪ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಯಲ್ಲಪ್ಪ ತಾಪಂ ಅಧ್ಯಕ್ಷರಾದ ಶ್ರೀ ಸೋಮಶೇಖರ್,  ಎಸ್ ಸಿ ತಾಲ್ಲೂಕು ಉಪಾಧ್ಯಕ್ಷರಾದ  ಶ್ರೀ ತಿಪ್ಪೇಸ್ವಾಮಿ, ಪಪಂ ಮಾಜಿ  ಅಧ್ಯಕ್ಷರಾದ ಶ್ರೀ ಗೋಪಾಲ್, ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷರಾದ ಶ್ರೀ ನಾಗಯ್ಯ, ಹಿರಿಯ ಮುಖಂಡರಾದ ಶ್ರೀ ದಲ್ಲಾಳಿ ದುರ್ಗಪ್ಪ ಹಾಗೂ ಹಿಂದುಪರ ಸಂಘಟನೆಯ ಮುಖಂಡರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು‌.

ಬಳ್ಳಾರಿ ಜಿಲ್ಲೆಯ ಹೊಸಪೇಟೆ  ತಾಲೂಕಿನ ಕಮಲಾಪುರ ಪಟ್ಟಣದ ಈಶ್ವರ ಆಲಯದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಅವರು ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಡಾ.ಬಿ.ಆರ್ ಅಂಬೇಡ್ಕರ್ ಕಾಲೋನಿ ಹಾಗೂ ಹೊಸ ಬಸ್ನಿಲ್ದಾಣ ಹಾಗೂ ಪಟ್ಟಣದ ಮುಖ್ಯರಸ್ತೆ ಉದ್ದಕ್ಕೂ ಮನೆ, ಅಂಗಡಿ ಮುಂಗಟ್ಟುಗಳಿಗೆ ತೆರಳಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕುರಿತು ಜನರಿಗೆ ಅರಿವು ಮೂಡಿಸಿ ಭಕ್ತರಿಂದ ದೇಣಿಗೆ ಸಂಗ್ರಹಿಸಿದರು.

ಈ ವೇಳೆ ಅಂಬೇಡ್ಕರ್ ಕಾಲೋನಿಯಲ್ಲಿ ಭಕ್ತಿರಿಂದ ದೇಣಿಗೆ ಸಂಗ್ರಹಿಸುತ್ತಿರುವಾಗ ಮುಸ್ಲಿ ಸಮುದಾಯದ ಹಿರಿಯ ಮುಖಂಡರಾದ ಶ್ರೀ ಮುಕ್ತಿಯರ್ ಪಾಷಾ ಎಂಬುವವರು ಸ್ವಯಂಪ್ರೇರಿತರಾಗಿ ಆಗಮಿಸಿ 5500 ರೂಪಾಯಿಗಳನ್ನು ನೀಡಿ ಶ್ರೀರಾಮನ ಕೃಪೆಗೆ ಪಾತ್ರರಾದರು.

About Author

Priya Bot

Leave A Reply