ಮಂಗಳೂರು-ಪಬ್ ಜೀ ಆಟ ಮಾಡುತ್ತಿದ್ದ ಬಾಲಕನ ಮನೆಯವರು ಬೈದಿದ್ದಾರೆ ಎನ್ನುವ ಸಲುವಾಗಿ ಮನೆಯಿಂದ ಹೊರ ಹೋದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಮಂಗಳೂರಿ ಹೊರವಲಯದ ಉಳ್ಳಾಲ  ಪಬ್ ಜೀ ಆಟದ ಸಲುವಾಗಿ 12 ವರ್ಷದ ಬಾಲಕನ ಕೊಲೆ ನಡೆದಿದೆ ಎಂದು ಶೆಂಕೆ ವ್ಯಕ್ತವಾಗಿದೆ. ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ ರೋಡು ಬಳಿ ಈ ಒಂದು  ಘಟನೆ ನಡೆದಿದ್ದು, ಕೊಲೆಯಾದ ಬಾಲಕನನ್ನು ಆಕಿಫ್ (12) ಎಂದು ಗುರುತಿಲಾಗಿದೆ. ಪ್ರತಿನಿತ್ಯ ಸಂಜೆ ವೇಳೆ ಪಬ್ ಜೀ ಆಡುತ್ತಿದ್ದ, ಇದಕ್ಕೆ ಮನೆಯಲ್ಲಿ ಪಾಲಕರು ಸಾಕಷ್ಟು ವಿರೋಧ ಮಾಡುತ್ತಿದ್ದರು. ‌ನಿನ್ನೆ ಸಂಜೆ ಸಹ ಪಾಲಕರು ಪಬ್ ಜೀ ಆಡಲು ಅವಕಾಶ ನೀಡಿರಲಿಲ್ಲ, ಹೀಗಾಗಿ ಮನೆಯಿಂದ ನಿನ್ನೆ ಸಂಜೆ ಕೂಡ ಮೊಬೈಲ್ ಹಿಡಿದುಕೊಂಡು ಹೋಗಿದ್ದ ಆಕೀಫ್, ಸ್ನೇಹಿತರು ಕರೆ ಮಾಡಿದ್ದಾರೆ ಎಂದು ಹೇಳಿ ಮನೆ ಪಕ್ಕದ ಗ್ರೌಂಡ್ ಗೆ ಹೋಗಿದ್ದು ಅಲ್ಲದೇ ಸ್ನೇಹಿತರೊಂದಿಗೆ ಪಬ್ ಜೀ ಆಡುತ್ತಿದ್ದ, ಇದೇ  ವಿಚಾರಕ್ಕೆ ಕೊಲೆ ನಡೆದಿರಬಹುದು ಅನ್ನೋ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ನಿನ್ನೆ ರಾತ್ರಿ ಮನಗೆ ಬಾರದ ಕಾರನ ಬಾಲಕನ ಪೋಷಕರು

ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ‌ಇಂದು ಬೆಳಗಿನ ಜಾವ ಮೃತದೇಹದ ಪತ್ತೆಯಾಗಿದ್ದು, ಈ ಸಂಭದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply