ನಿಶ್ಚಿತಾರ್ಥವಾಗಿದ್ದ ಹುಡುಗ ಕಪ್ಪು ‌ಎಂಬ ಕಾರಣಕ್ಕೆ ಕೊಲೆ.

0

ರಾಯಚೂರು  – ಮದುವೆ ನಿರಾಕರಣೆ ಮಾಡಿದಕ್ಕೆ ಕೊಲೆ ಮಾಡಿದ ಪ್ರೇಮಿ ಎನ್ನುವುದು ನಾವು ಸಾಮಾನ್ಯವಾಗಿ ಕೇಳಿರುತ್ತೆವೆ. ಆದ್ರೆ ಇಲ್ಲೊಂದ ಪ್ರಕರಣ ಹುಡುಗ ಕಪ್ಪು ಇದ್ದಾನೆ ಎನ್ನುವ ಕಾರಣಕ್ಕೆ ಮದುವೆ ನಿರಾಕರಣೆ ಮಾಡಿದಕ್ಕೆ ಕೊಲೆಯೊಂದು ನಡೆದಿದೆ‌‌. ತನ್ನ ಒಡ ಹುಟಿದ ತಂಗಿಯನ್ನು ಸ್ವತಃ ಅಣ್ಣ ಕೊಚ್ಚಿ ಕೊಲೆ ಮಾಡಿದ್ದಾನೆ. ನಿಶ್ಚಿತಾರ್ಥದ ಹುಡುಗ ಕಪ್ಪಗೆ ಇದ್ದಾನೆ. ಹೀಗಾಗಿ ಆ ಹುಡುಗನನ್ನು ಮದುವೆ ಆಗಲ್ಲಾ ಎಂದಿದಕ್ಕೆ ತಂಗಿಯನ್ನು ಅಣ್ಣಾ ಕೊಲೆ‌ ಮಾಡಿದ್ದಾನೆ.

ಈ ರೀತಿಯ ಅಪರೂಪದ ಘಟನೆ ನಡೆದಿದ್ದು, ರಾಯಚೂರು ಜಿಲ್ಲೆ ದೇವದುರ್ಗ ತಾ.‌ಗಬ್ಬೂರು ಗ್ರಾಮದಲ್ಲಿ ನಡೆದಿದೆ. ಚಂದ್ರಕಲಾ ( 22) ಕೊಲೆಯಾದ ಯುವತಿಯಾಗಿದ್ದು, ಕಳೆದ ಹಲವಾರು ತಿಂಗಳ ಹಿಂದೆ ಈ ಯುವತಿಯ ನಿಶ್ಚಿತಾರ್ಥವಾಗಿದ್ದು, ಜುಲೈ 13ರಂದು ಮದುವೆಗೆ ದಿನಾಂಕ ನಿಗದಿಯಾಗಿತ್ತು. ಹೀಗಾಗಿ ಮನೆಯವರು ಮದುವೆಗೆ ಲಗ್ನ ಪತ್ರಿಕೆ ಸಹ ಹಂಚಿಕೆ ‌ಸಹ ಮಾಡಿದ್ರು.

ಆದ್ರೆ ಯುವತಿ  ಏಕಾಏಕಿ ಮದುವೆಗೆ ನಿರಾಕರಿಸಿದಕ್ಕೆ ಕೋಪದಿಂದ ಅಣ್ಣ ತಂಗಿಯನ್ನು ಕೊಲೆ ಮಾಡಿದ್ದಾನೆ.‌ ಕೊಲೆ ಮಾಡಿದ ಅಣ್ಣಾ ಶಾಮ್ ಸುಂದರ್ ನನ್ನು ಗಬ್ಬೂರು ಪೊಲೀಸರು ಬಂಧನ ಮಾಡಿದ್ದು, ಈ ಸಂಬಂದ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply