ಹೌದು ಸಾಮಾನ್ಯವಾಗಿ ಈಗ ಈ ರೀತಿಯಲ್ಲಿ ತಮ್ಮ ಅಕೌಂಟ್ ನಲ್ಲಿ ಬರೆದು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಒಂದು ಬಲವಾದ ಕಾರಣವೂ ಇದೆ. ಯಾಕಂದ್ರೆ ಅವರ ಪೇಸ್ ಬುಕ್ ಅಕೌಂಟನ್ನು ಯಾರೋ ಹ್ಯಾಕ್ ಮಾಡಿರುತ್ತಾರೆ. ಹೌದು ಪೇಸ್ ಬುಕ್ ನಲ್ಲಿ ಕಳ್ಳರ ಹಾವಳಿ ಈಗ ಹೆಚ್ಚಾಗಿದೆ‌. ನಿಮ್ಮ ಪೇಸ್ ಬುಕ್ ನಲ್ಲಿ ಸರಿಯಾದ  ರೀತಿಯಲ್ಲಿ ಅಕೌಂಟ್ ಸೆಟಿಂಗ್ ಮಾಡದ ಕಾರಣ ಈ ರೀತಿಯಲ್ಲಿ ಯಾರು ಬೇಕಾದರೂ ನಿಮ್ಮ ಅಕೌಂಟ್ ಹ್ಯಾಕ್ ಮಾಡುತ್ತಾರೆ. ಪೇಸ್ ಬುಕ್ ಸಹ ಈ ರೀತಿ ಹ್ಯಾಕ್ ಆಗುವುದು ಗಮನಕ್ಕೆ ಬಂದಿದೆ. ಈ ರೀತಿಯಲ್ಲಿ ಅನೇಕ ಪ್ರಕರಣಗಳು ದಿನೇ ದಿನೇ ನಡೆಯುತ್ತಲೇ ಇರುತ್ತವೆ. ಅದೇ ಕಾರಣಕ್ಕಾಗಿ ಪೇಸ್ ಬುಕ್ ಸಹ ಆಗಾಗ ನಿಮ್ಮ ಅಕೌಂಟ್ ಸೆಕ್ಯೂರಿಟಿ ಬಗೆಗಿನೆ ಎಚ್ಚರಿಕೆಯನ್ನು ನೀಡುತ್ತಲೇ ಇರುತ್ತೆ.  ಆದ್ರೆ ಅದು  ನಮ್ಮ ಗಮನಕ್ಕೆ ಬಂದರೂ ಅದನ್ನು ನಾವು ಕಡೆಗನಿಸುತ್ತೆವೆ. ಇದರ ಲಾಭವನ್ನು ಪಡೆದ  ಹ್ಯಾಕರ್ ಗಳು ನಿಮ್ಮ ನಿಮ್ಮ ಅಕೌಂಟ್ ಹ್ಯಾಕ್ ಮಾಡಿ ಮೆಸೇಂಜರ್ ನಿಂದ ನಿಮ್ಮ ಹತ್ತಿರದ ಫ್ರೆಂಡ್ಸ್ ಗಳಿಗೆ ಹಣ ಕೇಳುತ್ತಾರೆ. ಪಾಪ ನಿಮ್ಮ ಸ್ನೇಹಿತರು ಏನೋ ಸಮಸ್ಯೆ ಆಗಿರಬೇಕು ಎಂದುಕೊಂಡು ನಿಮ್ಮ ಅಕೌಂಟ್ ಗೆ ಹಣ ಹಾಕುತ್ತಾರೆ. ಹತ್ತಿರದವರು ಇದ್ದರೆ ನಿಮಗೆ ಬೇಟಿಯಾದಾಗ ಇಲ್ಲವೇ ಕಾಲ್ ಮಾಡಿ ಹಣ ಹಾಕಿರುವೆ ಎಂದು ಹೇಳುತ್ತಾರೆ. ಆಗ ನಿಮಗೆ ಗೊತ್ತಾಗುತ್ತದೆ ನನ್ನ ಅಕೌಂಟ್ ಹ್ಯಾಕ್ ಆಗಿದೆ. ಎಂದು  ಈ ರೀತಿಯ ಆಗುವದನ್ನು ತಡೆಯಬೇಕು ಎಂದರೆ ನಾವೂ ನಮ್ಮ ಅಕೌಂಟ್ ನಲ್ಲಿ ಇರುವ ಸೆಕ್ಯುರಿಟಿ ಫೀಚರ್ ಗಳನ್ಮು ಸರಿಯಾಗಿ ನಿಭಾಯಿಸ ಬೇಕು ಇಲ್ಲ ವಾದಲ್ಲಿ ಈ ರೀತಿಯಲ್ಲಿ ಮತ್ತೊಂದು ದಿನ ನೀವು ಹಣ ಕಳೆದುಕೊಳ್ಳುತ್ತೀರಿ.

About Author

Priya Bot

Leave A Reply