ಬೇರೆಯವರ ಆಸ್ತಿ ಲಪಟಾಯಿಸುವ ಗತಿ ಇನ್ನೂ ನನ್ನ ಕುಟುಂಬಕ್ಕೆ ಬಂದಿಲ್ಲ

0

ಬಳ್ಳಾರಿ  – ಕಳೆದ ಒಂದು ವಾದದಿಂದ ಮಾಜಿ ಸಚಿವ ಸಂತೋಷ ಲಾಡ್ ಅವರ ಕುಟುಂಬ ಸದಸ್ಯರು ಅಕ್ರಮವಾಗಿ ಆಸ್ತಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಇದಕ್ಕೆ ಮಾಜಿ ಸಚಿವ ಸಂತೋಷ ಲಾಡ್ ಅವರು ಸ್ಪಷ್ಟನೆ ನೀಡಿದ್ದಾರೆ‌.

ಈ ಕುರಿತು ಇಂದು ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು , ಮತ್ತೊಬ್ಬರ ಆಸ್ತಿಯನ್ನು ಲಪಟಾಯಿಸುವ ಗತಿ ಇನ್ನೂ ನನ್ನ ಕುಟುಂಬಕ್ಕೆ ಬಂದಿಲ್ಲ. ಸಂಡೂರು ತಾಲೂಕಿನ ಮಾಳಾಪುರ ಗ್ರಾಮದ ನಿವಾಸಿ ಹನುಮಗಾರಿ ಹೊನ್ನೂರಪ್ಪ ತಂದೆ ಹನುಮಂತಪ್ಪ ಎಂಬುವರಿಂದ 1996ರಲ್ಲೇ ನನ್ನ ಕುಟುಂಬದ ಪೂರ್ವಿಕರು ಅಂದಾಜು 47.63 ಸೆಂಟ್ಸ್ ಜಮೀನನ್ನು ಕಾನೂನಿನ ಚೌಕಟ್ಟಿನಲ್ಲೇ ಖರೀದಿಸಿದ್ದಾರೆ.

ಆದ್ರೆ ಇದರಲ್ಲಿ ಯಾವುದೇ ಕಾನೂನು ಭಾಹಿರವಾಗಿ ಎಂದಿದ್ದಾರೆ. ಇನ್ನು ಅವರೇ ನನ್ನ ಬಳಿ ಬಂದು ಮಾತನಾಡಿದ್ದರೆ, ಆ ಜಮೀನನ್ನು ಅವರಿಗೆ‌ ಬಿಟ್ಟು ಕೊಡುತಿದ್ದೆ. ಆದ್ರೆ‌ ನೇರವಾಗಿ ಬಂದು ಮಾಧ್ಯಮಗಳ ಮುಂದೆ ಬಂದು ನನಗೆ‌ ನೋವು ಮಾಡಿದ್ದಾರೆ. ಹೀಗಾಗಿ ಕಾನೂನು ಹೋರಾಟ ಮುಂದು ವರೆಯಲಿದೆ ಎಂದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply