ಎನ್ನ ವಾಮಕ್ಷೇಮ

0

ಡಾ. ಈಶ್ವರಾನಂದ ಸ್ವಾಮೀಜಿ

ಎನ್ನ ವಾಮಕ್ಷೇಮ ನಿಮ್ಮದಯ್ಯ,
ಎನ್ನ ಹಾನಿವೃದ್ಧಿ ನಿಮ್ಮದಯ್ಯ,
ಎನ್ನ ಮಾನಾಪಮಾನವು ನಿಮ್ಮದಯ್ಯ,
ಬಳ್ಳಿಗೆ ಕಾಯಿ ದಿಮ್ಮಿತ್ತೆ ಕೂಡಲ ಸಂಗಮದೇವ?

ಶಿವನ ಕುರಿತು ಭಕ್ತನ ಪ್ರಾರ್ಥನೆ ಈ ವಚನದಲ್ಲಿ ಕಾಣುತ್ತೇವೆ. ಭಕ್ತನು ತಾನು ತನ್ನನ್ನೇ ಭಗವಂತನಿಗೆ ಅರ್ಪಿಸಿಕೊಂಡ ರೀತಿ ಇದು. ಅವನ ಆರೋಗ್ಯ, ಅವನ ಹಾನಿ-ವೃದ್ಧಿ, ಅವನ ಮಾನ-ಅಪಮಾನ ಎಲ್ಲವೂ ಶಿವನನ್ನೇ ಅವಲಂಬಿಸಿವೆ. ಬಳ್ಳಿಗೆ ಕಾಯಿ ಭಾರವೇ? ಭೂಮಂಡಲವೇ ಹೊತ್ತಿರುವ ನಿನಗೆ, ಒಬ್ಬ ಭಕ್ತ ಭಾರನಾಗುವನೇ? ಇಲ್ಲ. ಭಕ್ತನ ರಕ್ಷಣೆಯ ಭಾರ ಶಿವನದೆ ಆಗಿದೆ. ಯಾವುದಕ್ಕೂ ಭಕ್ತ ಹೆದರಬೇಕಿಲ್ಲ. ಅವನು ಕರುಣಾಮಯಿ ಆಗಿದ್ದಾನೆ.

ಭಕ್ತನೊಬ್ಬನ ಮದುವೆ ಆಯ್ತು. ಅದೇ ದಿನ ರಾತ್ರಿ ನದಿಯ ಈ ದಡದಿಂದ ಆ ದಡಕ್ಕೆ ಹೊಗಬೇಕಿತ್ತು. ನವವಧು ಮತ್ತು ನೆಂಟರಿಷ್ಟರೊಡನೆ ದೋಣಿಯಲ್ಲಿ ಪ್ರಯಾಣ ಮಾಡುತಿದ್ದನು. ಆಗ ಆಕಸ್ಮಿಕ ಬಿರುಗಾಳಿ ಬಿಸತೊಡಗಿತು. ಬಿರುಗಾಳಿಯಿಂದ ನದಿಯ ಪ್ರವಾಹ ಹೆಚ್ಚುತ ನಡೆಯಿತು. ಪ್ರವಾಹಕ್ಕೆ ಸಿಕ್ಕ ದೋಣಿ ಹುಲ್ಲು ಕಡ್ಡಿಯಂತಾಯಿತು. ಎಲ್ಲರು ಜೀವ ಭಯದಿಂದ ಹೇದರಿದರು. ಆದರೆ ಭಕ್ತ ಮಾತ್ರ ಯಾವ ಭಯವಿಲ್ಲದೆ ಆನಂದದಿಂದ ಕುಳಿತಿದ್ದನು. ಅದನ್ನು ಕಂಡ ನವವಧು “ನಿಮಗೆ ಭಯವಾಗುತಿಲ್ವಾ?” ಎಂದು ಗಂಡನನ್ನು ಅಚ್ಚರಿಯಿಂದ ಕೇಳಿದಳು. ಅದಕ್ಕೆ ಉತ್ತರ ಕೊಡದೆ ಸೊಂಟದಲ್ಲಿರುವ ಕತ್ತಿಯನ್ನು ತಗೆದು ಹೆಂಡತಿಯ ಗಂಟಲನ್ನು ಇರಿವ ಹಾಗೆ ಹತ್ತಿರ ತಂದನು. ಹೆಂಡತಿ ವಿಚಲಿತವಾಗಲಿಲ್ಲ. ಆಗ ಭಕ್ತ “ಯಾಕೆ ನಿನಗೆ ಸ್ವಲ್ಪವದರೂ ಭಯವಾಗುತಿಲ್ವಾ?” ಎಂದು ಕೆಳಿದಕ್ಕೆ ಹೆಂಡತಿ “ಈ ಕತ್ತಿ ಅಪಾಯಕಾರಿ ಖಂಡಿತ, ಆದರೆ ಅದನ್ನು ಹಿಡಿದವರು ನನ್ನ ಮೇಲೆ ತುಂಬಾ ಪ್ರೀತಿಯುಳ್ಳ ನನ್ನ ಗಂಡ ಆದ್ದರಿಂದ ನನಗೆ ಭಯವಾಗಲಿಲ್ಲ” ಎಂದಳು. ಆಗ ಭಕ್ತ “ಹಾಗೆಯೇ ನನಗೂ ಈ ಬಿರುಗಾಳಿ ಅಲೆಗಳುಅಪಾಯಕಾರಿಯಾಗಿರಬಹುದು, ಆದರಿ ಇದನ್ನಾಡಿಸುವ ಭಗವಂತ ಕರುಣಾಮಯಿ, ಆದ್ದರಿಂದ ನನಗೆ ಭಯವಿಲ್ಲ” ಎಂದನು.

ಭಕ್ತನು ಅಭವನ ಮೇಲಿಟ್ಟಿರುವ ಭಕ್ತಿ, ನಂಬಿಕೆ ಅಪಾರವಾದುದು. ಆ ನಂಬಿಕೆಯಿಂದ ಭಯವಿಲ್ಲದೆ ಪ್ರಪಂಚವೆಂಬ ಸಾಗರದಲ್ಲಿ ಸಂಸಾರ ಎಂಬ ದೋಣಿಯಲ್ಲಿ ಪ್ರಯಾಣಿಸಬಹುದು. ಇದು ಈ ಮೇಲಿನ ವಚನದ ತಿರುಳು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply