ಮೈಸೂರು – ಕಳೆದ ಒಂದು ವರ್ಷಗಳಿಂದ ಮನುಕುಲಕ್ಕೆ ಕಂಟಕ ವಾಗಿರುವ ಕರೋನಾ ಹೆಮ್ಮಾರಿ ಈಗ ಮತ್ತೆ ಕಾಡುತ್ತಿದೆ. ಕರೋನಾ ಎರಡನೇ ಅಲೆ ಜೋರಾಗಿದ್ದಾ, ರಾಜ್ಯದಲ್ಲಿ ಸೋಂಕಿ ವ್ಯಾಪಕವಾಗಿ ಹರಡುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಮಹಾ ನಗರ ಪಾಲಿಕೆಗೆ ಕರೋನಾ ಶಾಕ್ ನೀಡಿದ್ದು, ಪಾಲಿಕೆಯ ಎಲ್ಲ ಸಭೆ ಸಮಾರಂಭಗಳು ಮುಂದೂಡಿಕೆ ಮಾಡಿದೆ.
ಪಾಲಿಕೆ ಮೇಯರ್ ,ಆಪ್ತ ಸಹಾಯಕ, ಸದಸ್ಯರು,ಸಿಬ್ಬಂದಿ ಸೇರಿದಂತೆ ಹಲವರಿಗೆ ಪಾಸಿಟಿವ್ ಬಂದಿದೆ. ಪಾಲಿಕೆ ಸದಸ್ಯರು, ಸಿಬ್ಬಂದಿ ಸೇರಿದಂತೆ 8ಕ್ಕೂ ಹೆಚ್ಚು ಮಂದಿಗೆ ಕೊರೊನ ಸೋಂಕು. ಈ ಹಿನ್ನೆಲೆ ಪ್ರತಿ ದಿನ ಬೆಳಗ್ಗೆ ಪಾಲಿಕೆಯ ಸಂಪೂರ್ಣ ಆವರಣಕ್ಕೆ ಸ್ಯಾನಿಟೈಜ್ ಮಾಡಿದ್ದು ಒಂದು ವಾರಗಳ ತನಕ ಪಾಲಿಕೆಯಲ್ಲಿ ಯಾವುದೇ ಸಭೆ ನಡೆಸುವಂತಿಲ್ಲ ಎಂದು ಆದೇಶ ಮಾಡಲಾಗಿದೆ. ಮೇಯರ್ ಗೆ ಸೋಂಕು ತಗುಲಿದ ಹಿನ್ನೆಲೆ ಬಹುತೇಕ ಸಭೆಗಳು ಮುಂದೂಡಿಕೆ ಮಾಡಲಾಗಿದೆ.
ಈ ವಾರದಲ್ಲಿ ನಡೆಯಾಬೇಕಿದ್ದ ಬಜೆಟ್ ಪೂರ್ವಭಾವಿ ಸಭೆ ಸಹ ರದ್ದು ಮಾಡುವ ಅನುಮಾನ ಇದ್ದು, ಮುಂಜಾಗ್ರತಾ ಕ್ರಮವಾಗಿ ಪಾಲಿಕೆಯ ಎಲ್ಲ ಸದಸ್ಯರಿಗೂ ಸಿಬ್ಬಂದಿಗೂ ಕೋವಿಡ್ ಪರೀಕ್ಷೆಗೆ ಅರೋಗ್ಯ ಇಲಾಖೆ ಮುಂದಾಗಿದೆ….