ಜಾರಕಿ ಹೊಳಿ ಸಿಡಿ ಪ್ರಕರಣ ಆರೋಪಿಗೆ ಅದ್ದೂರಿ ಸ್ವಾಗತ, ನರೇಶ್ ಬ್ಯಾನರ್ ನಲ್ಲಿ ಕಾಂಗ್ರೆಸ್ ಚಿನ್ಹೆ..!?

0

ಬೆಂಗಳೂರು

ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಅವರ  ರಾಸಲೀಲೆ  ಪ್ರಕರಣದ ಪ್ರಮುಖ ಆರೋಪಿ ನರೇಶ್ ಗೌಡ್ ಗೆ ಅದ್ದೂರಿ ಸ್ವಾಗತ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಭುವನಹಳ್ಳಿಯಲ್ಲಿ ನರೇಶ್ ಗೆ ಅದ್ದೂರಿಯಾಗಿ ಸ್ವಾಗತ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಅದರಲ್ಲಿ ಅವರ ಸ್ವಾಗತಿಸುವ ಬ್ಯಾನರ್ ನಲ್ಲಿ ಕಾಂಗ್ರೆಸ್ ಯುವ ಮುಖಂಡರು ಅಂಥಾ ಮುದ್ರಿತ ಬ್ಯಾನರ್ ಗಳು ಜನರಲ್ಲಿ ಒಂದು ರೀತಿಯ ಗೊಂದಲ ಉಂಟು ಮಾಡಿವೆ.

ಕಾರಣ ರಾಸ ಲೀಲೆ ಸಿಡಿ ಹಿಂದೆ ಡಿಕೆಸಿ ಅವರ ಕೈವಾಡ ಇದೆ ಎನ್ನುವ ಆರೋಪಗಳುಬ ಕೇಳಿ ಬಂದಿತ್ತು, ಆಗ ಅದನ್ನು ಡಿಕೆಸಿ ಅವರು ಸಾರಾ ಸಗಟಾಗಿ ತಳ್ಳಿ ಹಾಕಿದ್ದರು. ಆದ್ರೆ ಈಗ ನರೇಶ್ ಅವರ ಸ್ವಾಗತ ಪೋಟೋದಲ್ಲಿ ಕಾಂಗ್ರೆಸ್ ಭಾವ ಚಿತ್ರ ಇರುವುದು ಹಲವಾರು ಗೊಂದಲಕ್ಕೆ ಕಾರಣವಾಗಿದೆ‌‌. ನರೇಶ್ ತಮ್ಮ ರಾಜಕೀಯ ಜೀವನವನ್ನು ಕಂಡು ಕೊಳ್ಳುವ ಉದ್ದೇಶ ಹಾಗೂ ದುಡ್ಡು ಮಾಡುವ ಉದ್ದೇಶದಿಂದ ಈ ಕೆಲಸಕ್ಕೆ ಕೈ ಹಾಕಿದ್ದಾರೆ ಎನ್ನುವ ಅನುಮಾನಗಳು ಹುಟ್ಟಿವೆ.  

ಅಷ್ಟಕ್ಕೂ ನರೇಶ್ ಪತ್ರಕರ್ತ ಎನ್ನುವ ಕಾರಣಕ್ಕಾಗಿ ನನಗೆ ಪರಿಚಯ ಎನ್ನುವ ಡಿಕೆ ಶಿವಕುಮಾರ್ ಅವರು ನರೇಶ್ ಗೆ ಹೇಗೆ ಕಾಂಗ್ರೆಸ್ ನಲ್ಲಿ ಸ್ಥಾನ ಕೊಟ್ಟರು ಎನ್ನುವ ಮಾತು ಈಗ ಚರ್ಚೆಗೆ ಗ್ರಾಸವಾಗಿದೆ‌‌. ಅಲ್ಲದೆ ರಮೇಶ್ ಜಾರಕಿ ಹೊಳಿ ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್ ನ ಕೈವಾಡ ಇದೆ ಎನ್ನುವುದು ಪಕ್ಕಾನಾ?

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply