ಬ್ಯಾರಿ ಅಕಾಡಮಿಯಿಂದ ನೂತನ ತಂತ್ರಜ್ಞಾನ ಬಿಡುಗಡೆ

0

ಮಂಗಳೂರು – ಸುಮಾರು ಒಂದು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ  ಬ್ಯಾರಿ ಭಾಷೆಯ ನೂತನ ಲಿಪಿಯನ್ನು ರೋಮನ್ ‌ಲಿಪಿಯೊಂದಿಗೆ ಲಿಪ್ಯಂತರಣ ಮಾಡುವ ತಂತ್ರಜ್ಞಾನದ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಬ್ಯಾರಿ ಅಕಾಡಮಿಯ ಕಚೇರಿಯಲ್ಲಿ ನಡೆಯಿತು.

ಲಿಪ್ಯಂತರ ತಂತ್ರಜ್ಞಾನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಬ್ಯಾರಿ ಅಕಾಡಮಿಯ ಅಧ್ಯಕ್ಷ ರಹೀಂ‌ ಉಚ್ಚಿಲ್, ಬ್ಯಾರಿ ಭಾಷೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳು, ಹೊರ ರಾಜ್ಯಗಳು, ದೇಶ, ವಿದೇಶದಲ್ಲಿರುವ ಸುಮಾರು 30 ಲಕ್ಷಕ್ಕೂ ಅಧಿಕ ಮಂದಿ ಮಾತನಾಡುತ್ತಾರೆ.

ಈ ಭಾಷೆಗೆ ಲಿಪಿ ಇಲ್ಲ ಎಂಬ ಕೊರಗನ್ನು  10 ತಿಂಗಳ ಹಿಂದೆ 11 ಮಂದಿಯ ತಂಡವೊಂದು ಅಕಾಡಮಿಯ ನಿರ್ದೇಶನದಂತೆ  ಲಿಪಿಯ ಸಂಶೋಧನೆ, ರಚನೆ ಮತ್ತು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರ ಕಲಿಕಾ ವಿಧಾನದ ಭಾಗವಾಗಿ ಸ್ವರಾಕ್ಷರ, ವ್ಯಂಜನಾಕ್ಷರ, ಒತ್ತಕ್ಷರಗಳು ಮತ್ತು ಸಂಖ್ಯೆಗಳನ್ನು ಹೊಂದಿರುವ ಸಿಡಿಯನ್ನು ಈಗಾಗಲೆ ಬಿಡುಗಡೆಗೊಳಿಸಿದೆ. ಇದೀಗ ಅದರ ಮುಂದುವರಿದ ಭಾಗವಾಗಿ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಬ್ಯಾರಿ ಲಿಪಿಯನ್ನು ಇಂಗ್ಲಿಷ್ ಭಾಷೆಯ ರೋಮನ್ ಲಿಪಿಯೊಂದಿಗೆ ಅಂತರ್ಜಾಲದಲ್ಲಿ ಲಿಪ್ಯಂತರ ಮಾಡುವ ಯೋಜನೆಯನ್ನು ವ್ಯವಸ್ಥೆಗೊಳಿಸಲಾಗಿದೆ ಎಂದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply