ಕೋವಿಡ್ ಆಸ್ಪತ್ರೆಗೆ ಹೊಸ ಸ್ಪರ್ಶ.

0

ರಾಯಚೂರು – ರಾಯಚೂರು ಓಪೆಕ್ ಆಸ್ಪತ್ರೆಗೆ ಹೊಸ ಸ್ಪರ್ಶ ನೀಡಲಾಗಿದೆ. ಸ್ವಚ್ಚತೆಯಿಲ್ಲದೆ, ವೈದ್ಯರ ಕೊರತೆ, ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎನ್ನುವ ಹಲವು ಆರೋಪಗಳು ಸೋಂಕಿತರಿಂದ ಕೇಳಿ ಬಂದಿದ್ದವು. ಹೀಗಾಗಿ ಕೋವಿಡ್ ಆಸ್ಪತ್ರೆಯಲ್ಲಿ ಹೊಸ ಸ್ಪರ್ಶವನ್ನ ನೀಡಲಾಗಿದೆ. ಆಸ್ಪತ್ರೆಯೊಳಗೆ ಸ್ವಚ್ಚತೆ, ಕುಡಿಯುವ ನೀರು, ಸಿಸಿ ಕ್ಯಾಮರ್ ಆಳವಡಿಸುವುದು,  ಸೋಂಕಿತರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಸೇರಿದಂತೆ ಹಲವು ಬದಲಾವಣೆ ಮಾಡುವ ಮೂಲಕ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ.

ಆಸ್ಪತ್ರೆಯೊಳಗೆ ಸಸಿಗಳು ಕುಂಡಗಳು, ಹೂವಿನ ಕೊಡಲುಗಳು ಇರಿಸುವ ಮೂಲಕ ಸರ್ಕಾರ ಸ್ವಾಮ್ಯದ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಕಡಿಮೆಯಿಲ್ಲ ಎನ್ನುವಂತೆ ಭಾಸವಾಗುವಂತೆ ಮಾಡಲಾಗಿದೆ. ಇನ್ನೂ ಕೊರೊನಾ ಸೋಂಕಿತರಿಗಾಗಿ ಓಪೆಕ್ ಆಸ್ಪತ್ರೆಯನ್ನ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಆರಂಭದಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೆ ಇರುವುದು, ವೈದ್ಯರು, ಸಿಬ್ಬಂದಿಗಳ ಸ್ಪಂದಿಸಿರುವುದು, ಆಸ್ಪತ್ರೆಯೊಳಗೆ ಸ್ವಚ್ಚತೆ ಇಡದೆ ಎಲ್ಲೆಂದರೇ ಕಸ ಹಾಕುವುದು, ಶೌಚಲಯಗಳು ಸ್ವಚ್ಚತೆ ಇರದೆ ದುರ್ವಾಸನೆ ಬರುವುದು ಸೇರಿದಂತೆ ಹಲವು ಆರೋಪಗಳಿದ್ದವು.

ಆದರೆ ಇದೀಗ ಆರೋಪಗಳಿಗೆ ಅಪಾದವಾಗುವಂತೆ ಓಪೆಕ್ ಆಸ್ಪತ್ರೆಯಲ್ಲಿ ಸೂಕ್ತವಾದ ವ್ಯವಸ್ಥೆಯನ್ನ ಉಸ್ತುವಾರಿಯನ್ನ ವಹಿಸಿಕೊಂಡಿರುವ ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮಗೌಡ ನಿಭಾವಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply