ವಿಜಯಪುರ- ಗುಮ್ಮಟನಗರಿ ವಿಜಯಪುರದ ಜನತೆ ಇಂದು ಬೆಳ್ಳಂಬೆಳ್ಳಿಗ್ಗೆ ಬೆಚ್ಚಿ ಬಿದ್ದಿದ್ದಾರೆ ಹೊಸ ವರ್ಷದ ಮೊದಲ ದಿನವೇ ವಿಜಯಪುರದಲ್ಲಿ ನೆತ್ತರು ಹರಿದಿದೆ. ಹಳೆಯ ದ್ವೇಷದಿಂದ ವ್ಯಕ್ತಿಯ ಕೊಗಲೆ ಕೊಲೆ ಆಗಿದೆ.ವಿಜಯಪುರ ತಾಲೂಕಿನ ರತ್ನಾಪುರ ಬಳಿಯ ಎ1 ಡಾಬಾದಲ್ಲಿ ಕೊಲೆ ನಡೆದಿದ್ದು, ಮಹಾದೇವ ಕವಲಗಿ 57 ವರ್ಷ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಮಹಾದೇವನ ಕತ್ತು ಕೊಯ್ದು ಹಾಗೂ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು,ಸಂತೋಷ ಎಂಬ ಯುವಕ ಕೊಲೆ ಮಾಡಿದ್ದಾನೆ ಎನ್ನಲ್ಲಾಗಿದ್ದು,ಕೊಲೆಗೀಡಾದ ಮಹದೇವ ಹಾಗೂ  ಯುವಕ ಸಂತೋಷ ತಂದೆಯ ಮದ್ಯೆ ಈ ಹಿಂದೆ ಜಗಳ ಆಗಿತ್ತಂತೆ.ಅದೇ ದ್ವೇಷದ ಹಿನ್ನೆಲೆಯಲ್ಲಿ ಮಹಾದೇವನನ್ನು ಸಂತೋಷ ಹತ್ಯೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಘಟನೆಯ ಬಳಿಕ ಸಂತೋಷ ಹಾಗೂ ಅವನ ಜೊತೆಗಿದ್ದ ದಶರಥ ಹಾಗೂ ಪಾಂಡುರಂಗ ಪರಾರಿಯಾಗಿದ್ದಾರೆ.ಸದ್ಯ ಸ್ಥಳಕ್ಕೆ ತಿಕೋಟಾ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದು, ಕೊಲೆಗೀಡಾದ ಮಹಾದೇವನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಮಬಂಧ ತಿಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply