ಬೆಂಗಳೂರು- ರಾತ್ರೋ ರಾತ್ರಿ ಮೇಕಪ್ ಮಾಡಿಕೊಂಡು,  ಮನೆಯ ಮೂಲೆಯಲ್ಲಿ ಕುಳಿತು, ಒಬ್ಬೊಬ್ಬರಾಗಿ ಮಾತನಾಡಿ ಮನೆ ಮಂದಿಗೆಲ್ಲಾ ಭಯ ಹುಟ್ಟಿಸಿದ ನಿರ್ಮಲಾ,  ಅವರು ಹೀಗೆ ಮಾಡಲು ಕಾರಣ ಏನು ಎನ್ನುವ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಈಗ ಗುಂಪುಗಾರಿಕೆ ಆರಂಭವಾಗಿದೆ. ಜೊತೆಯಲ್ಲಿ ಪ್ರತಿಯೊಬ್ಬರೂ ನಾವು ಇಲ್ಲಿ ಬಂದಿರುವುದು ಆಟ ಆಡಲು ಮತ್ತು ಬಿಗ್ ಬಾಸ್ ಗೆಲ್ಲಲು ಎನ್ನುವ ಮಾತುಗಳು ಪ್ರತಿ ಸ್ಪರ್ಧಾಳುಗಳು ಆಡ ತೊಡಗಿದ್ದಾರೆ. ಪ್ರತಿಯೊಬ್ಬರ ಮನೋಭಾವ ಈಗ ಎಲ್ಲರಿಗೂ ಅರಿವಾಗುತ್ತಿದೆ. ಇನ್ನು  ಬಿಗ್ ಬಾಸ್ ಮನೆಯಲ್ಲಿ ಗುಂಪಿನಲ್ಲಿ ಕೊಂಚ ಭಿನ್ನವಾಗಿ ಗುರುತಿಸಿಕೊಂಡ ನಿರ್ಮಾಲಾ ಅವರು ಮನೆಯಲ್ಲಿ ಒಬ್ಬರೇ ಕುಳಿತು ರಾತ್ರಿ ಎಲ್ಲರೂ ಮಲಗಿದೆ ಮೇಲೆ ಮೇಕಪ್ ಮಾಡಿಕೊಂಡು ಮನೆ ಮಂದಿಗೆಲ್ಲಾ ಭಯ ಹುಟ್ಟಿಸಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಮಾಡಲು ಕಾರಣ ಚಂದ್ರಕಲಾ ಅವರು ಮಾತನಾಡಿದ ಮಾತು ಇರಬಹುದು. ಕಾರಣ ಮನೆ ಮಂದಿಯ ಜೊತೆಯಲ್ಲಿ ಮಿಂಗಲ್ ಆಗದ ನಿರ್ಮಲಾ ಅವರಿಗೆ ಚಂದ್ರಕಲಾ ಅವರು ಚಳಿ ಬಿಡಿಸಿದ್ರು ಇದೇ ಕಾರಣಕ್ಕೆ ನಿರ್ಮಲಾ ಅವರು ಈ ರೀತಿ ಮಾಡಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply