ಬೆಂಗಳೂರು – ಕನ್ನಡದ ಹೆಸರಾಂತ ನಟಿ ರಾಧಿಕಾ ಕುಮಾರಸ್ವಾಮಿ ಅವರ ಮೇಲೆ ಬಂದಿರುವ ಆರೋಪ ಸುದ್ದು ಸುಳ್ಳು ಎಂದು ಸ್ವತಃ ರಾಧಿಕಾ ಸ್ಪಷ್ಟಪಡಿಸಿದ್ದಾರೆ.  ವಂಚನೆಯ ಆರೋಪದ ಮೇಲೆ ಸೆರೆಯಾಗಿರುವ ಯುವಾರಜ್ ಅವರು ನನ್ನ ತಂದೆಯ ಸ್ನೇಹಿತರು ಹಾಗಾಗಿ ಅವರು ನನಗೆ ಪರಿಚಯ. ಅವರೊಂದಿಗೆ ನನಗೆ ಯಾವುದೇ ವ್ಯವಹಾರಿಕ  ಸಂಭಂಧ ಇಲ್ಲ. ಎಂದು ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಯುವರಾಜನ ವಿಚಾರಣೆ ವೇಳೆ ಆತನಿಂದ ತಮಗೂ ಹಣ ಸಂದಾಯ ಆಗಿದೆ ಎಂಬ ವಿಚಾರ ಪ್ರಸ್ತಾಪವಾಗಿರುವ ಕುರಿತಾದ ವರದಿಗಳ ಹಿನ್ನೆಲೆಯಲ್ಲಿ ರಾಧಿಕಾ ಅವರು ಹೌದು ಅವರು ನನಗೆ ಸಿನಿಮಾ ಮುಂಗಡ ಹಣವಾಗಿ 15 ಲಕ್ಷ ರೂ ನನ್ನ ಖಾತೆಗೆ ಜಮಾವನೆ ಮಾಡಿದ್ದಾರೆ. ಎಂದು ಹೇಳಿದರು.

ಸುಮಾರು ವರ್ಷಗಳಿಂದಲೂ (17) ಯುವರಾಜನ ಪರಿಚಯವಿದೆ. ನಾಟ್ಯರಾಣಿ ಶಾಂತಲೆ ಐತಿಹಾಸಿಕ ಚಿತ್ರ ನಿರ್ಮಾಣದ ವಿಚಾರವಾಗಿ ಆತ ನನ್ನೊಂದಿಗೆ ಮಾತುಕತೆ ನಡೆಸಿದ್ದ ಎಂದು ರಾಧಿಕಾ ತಿಳಿಸಿದ್ದಾರೆ. ಆದರೆ ಈ ಸಿನೆಮಾ ಆರಂಭವಾಗಲೇ ಇಲ್ಲ. ನನಗೆ ಯುವರಾಜ್ ಅವರಿಂದ ಬಂದಿದ್ದು ಕೆವಲ 15 ಲಕ್ಷ ಮಾತ್ರ  ಎಂದು  ಹೇಳಿ ತಮ್ಮ ಮೇಲೆ ಬಂದಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ.

Leave A Reply