ಬಳ್ಳಾರಿ-  ಗಣಿ ನಾಡು ಬಳ್ಳಾರಿಯ ಸೂರ್ಯಕಲಾ ಮತ್ತು ಸೇವಾ ಬಳಗದಿಂದ ಆಯೋಜಿಸಿದ್ದ  ಸಾಧಕರಿಗೆ ಸನ್ಮಾನ  ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಪ್ರತಿಷ್ಟಿತ  NSG ಕಮಾಂಡೋ ಆಗಿ ಬಳ್ಳಾರಿ ಜಿಲ್ಲೆಯ ಪ್ರಪ್ರಥಮ ಕಮಾಂಡರ್ ಆಗಿ ಆಯ್ಕೆಯಾದ ಅಮೀನುದ್ದೀನ್ ಬಾಷಾ ಅವರಿಗೆ ಮತ್ತು ಇನ್ನೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸೇನೆಯ ಶೇಖ್ ಮಸ್ತಾನ ವಲಿ ಅವರಿಗೆ ಹಾಗು  ನಿವೃತ್ತಿ ಸೈನಿಕರಾದ ಅಮರ್ ನಾಥ್‌ಮತ್ತು  ನಾಗರಾಜ್ ರವರಿಗೆ ಘನ ಗೌರವಗಳೊಂದಿಗೆ ಸನ್ಮಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.  ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೈದುಲು ಅದಾವತ್  ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,‌ಮತ್ತು

ಈ ಕಾರ್ಯಕ್ರಮಕ್ಕೆ ಮುಖ್ಯ ಆಕರ್ಷಣೆಯಾಗಿ  ಶ್ರೀ ಶ್ರೀ ಶ್ರೀ ಕಲ್ಯಾಣ ಸ್ವಾಮೀಜಿ‌ಅವರು  ಮತ್ತು ಮುಸ್ಲಿಂ ಸಮುದಾಯದ ಜನಾಭ ಸೈಯದ್ ರುತರ ‌ರವರು ಕ್ರಿಶ್ಚಿಯನ್ ಸಮುದಾಯದ ಚರ್ಚ್‌ನ ಫಾದರ್ ‌ಐವನ್ ಪಿಂಟೊ ಅವರು ಪಾಲ್ಗೊಂಡು ದೇಶದ ಸಮಾನತೆ ,ಸಹೋದರತೆ  ಭಾತೃತ್ವನ್ನು ಮೂಡಿಸಿದರಲ್ಲದೆ ದೇಶಕ್ಕೆ ಸೇವೆ ಸಲ್ಲಿಸಿದ ಇಂಥಹ ಮಹಾನ್ ವ್ಯಕ್ತಿಗಳಿಗೆ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿ  ಆಶೀರ್ವಾದಗಳನ್ನು ನೀಡಿ ಶುಭ ಹಾರೈಸಿದರು

About Author

Priya Bot

Leave A Reply