ಬಳ್ಳಾರಿ- ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜನರು ಇದಕ್ಕೆ ತುತ್ತಾಗುತ್ತಿದ್ದಾರೆ. ಸಾಮಾಜಿಕ ಜಾಲತಾನವನ್ನು ಬಳಸಿಕೊಂಡು ಜನರಿಗೆ ಮೋಸ ಮಾಡುವುದು ವಂಚಕರಿಗೆ ತುಂಬಾ ಸಲಿಸಾಗಿದೆ. 

ಇತ್ತೀಚೇಗೆ ವಂಚಕರು ಪೋಲೀಸರ್ ಹೆಸರಿನಲ್ಲಿ ವಂಚನೆಗೆ ಕೈ ಹಾಕಿದ್ದಾರೆ. ಹೌದು ಬಳ್ಳಾರಿಯಲ್ಲಿ ಸೈಬರ್ ಠಾಣೆ ಪೊಲೀಸರನ್ನೇ ಯಮಾರಿಸುತ್ತಿದ್ಧಾರೆ, ಆನ್ ಲೈನ್ ವಂಚಕರು. ಕಳ್ಳರಿಗೆ ಪೊಲೀಸರೇ ಟಾರ್ಗೆಟ್ ಆಗಿದ್ದಾರೆ. ಪೊಲೀಸರ ಹೆಸರಿನಲ್ಲಿ ವಂಚಿನೆ  ಮಾಡಿದರೆ ಯಾರು ಏನು ಕೇಳೊಕಾಗಲ್ಲ, ಏನು  ಮಾಡೋಲ್ಲ ಅನ್ನೋದನ್ನ ವಂಚಕರು ದಾಳ ಮಾಡಿಕೊಂಡಿದ್ದಾರೆ.

ವಂಚಕರು ಪೋಲೀಸರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಐಡಿಗಳನ್ನು ಮಾಡಿಕೊಂಡು ಜನರಿಗೆ ದುಡ್ಡು ಕೊಡುವಂತೆ ಪೀಡಿಸುತ್ತಾರೆ.  ಫೇಸ್ ಬುಕ್ ಮೇಸೆಂಜರ್  ಮೂಲಕ ಅರ್ಜೆಂಟ್ ಆಗಿ  ದುಡ್ಡು ಬೇಕಾಗಿದೆ  ಎಂದು ಮೇಸೆಜ್ ಮಾಡುತ್ತಾರೆ. ತಮ್ಮದೇ ಪೋನ್ ಪೇ, ಗೂಗಲ್ ಪೇ, ನಂಬರ್ ಕೊಟ್ಟು ಇದೆ ನಂಬರಗೆ ದುಡ್ಡು ಹಾಕುವಂತೆ ಹೇಳುತಾರೆ. ಜನರನ್ನು ಕಾಯುವಂತಹ  ರಕ್ಷಕರಿಗೆ ಈ ರೀತಿಯಾದರೆ ಇನ್ನು ಸಾಮಾನ್ಯ ಜನರ ಪಾಡೇನು.

ವಂಚಕರು ಬಳ್ಳಾರಿಯ ಪಿಎಸ್ಐ, ಎಎಸ್ಐ, ಪಿಐ, ಕಾನಸ್ಟೇಬಲ್ ಗಳ ಫೇಕ್ ಐಡಿ ಕ್ರಿಯೆಟ್  ಮಾಡಿ ಜನರ ಹತ್ತಿರ ದುಡ್ಡು ಹೊಡೆತಿದ್ದಾರೆ.  ಸೈಬರ್ ಪೊಲೀಸ್ ಠಾಣೆಯಲ್ಲಿ ಪಿಐ ಆಗಿದ್ದ ಸುಭಾಷ, ಸಂಡೂರು ಪಿಎಸ್ ಐ ಬಸವರಾಜ್ ಅವರ ಹೆಸರನಲ್ಲಿ ಫೇಕ್ ಐಡಿ ಸೃಷ್ಟಿ ಮಾಡಿ ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ. ಬಳ್ಳಾರಿಯಲ್ಲಿ ಸೈಬರ್ ಠಾಣೆಯಲ್ಲಿ ಇದರ ಪ್ರಕರಣ ದಾಖಲೆ ಮಾಡಿಕೊಂಡು ವಂಚಕರಿಗೆ ಬಲೆ ಬೀಸಿದ್ದಾರೆ. ಇನ್ನು ಸಾರ್ವಜನಿಕರು ಇಂತಹ ತಪ್ಪು ಮಾಹಿತಿಯಿಂದ  ವಂಚಿತರಾಗದಿರಿ, ಇಂತಹ ಕೃತ್ಯ ನಿಮ್ಮ ಗಮನಕ್ಕೆ ಬಂದಲ್ಲಿ ಪೋಲೀಸರಿಗೆ ಮಾಹಿತಿ ನೀಡಿ ಎಂಬ ಸಂದೇಶವನ್ನು ನೀಡಿದ್ದಾರೆ.

About Author

Priya Bot

Leave A Reply