ಹಾಸನ- ಎಟಿಎಮ್ ನಲ್ಲಿ ಕೆಲಸ ಮಾಡುತ್ತಿದ್ದ ಪಾಪಿ ಪತಿಯೊಬ್ಬ ಪತ್ನಿಗೆ ಚಾಕುವಿನಿಂದ ಇರುದು ಹೆಂಡತಿಯನ್ನು ಬರ್ಬರವಾಗಿ ಕೊಲೆಮಾಡಿ ತಾನೂ ಆತ್ಮಹತ್ಯೆ ಮಾಡೊಕೊಂಡಿರುವ ಘಟನೆ ಹಾಸನ ಜಿಲ್ಲೆಯ ಶಾಂತಿಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಗೃಹಿನಿಯನ್ನಅನ್ನಪೂರ್ಣ (23) ಎಂದು ಗುರುತಿಸಲಾಗಿದ್ದು.
ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿಯನ್ನು ತುಳಸಿದಾಸ (40) ಎಂದು ಗುರುತಿಸಲಾಗಿದೆ. ಸ್ಥಳೀಯ ಎಟಿಎಮ್ ನಲ್ಲಿ ತುಳಸಿದಾಸ ಸೆಕ್ಯೂರಿಟಿ ಗಾರ್ಡ್ ಎಟಿಎಮ್ ಕೆಲಸ ಮಾಡುತಿದ್ದಾ. ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಇಂದು ಕೆಲಸಕ್ಕೂ ಸಹ ಹೋಗಿರಲಿಲ್ಲಾ. ಸಂಜೆ ಹೆಂಡತಿ ಜಮೀನಿಗೆ ಕರೆಯಿಸಿ ಅವಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ . ಬಳಿಕ ಅದೇ ಜಮೀನಿನಲ್ಲಿ ತುಳಸಿದಾಸ ಮರಕ್ಕೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ವಿಷಯ ತಿಳಿದ ಶಾಂತಿ ಗ್ರಾಮ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ….