ನಿರಂತರವಾಗಿ ನಡೆಯುತ್ತಿರುವ ಸಸಿ ನೆಡುವ ಕಾರ್ಯಕ್ರಮ

0

ರಾಯಚೂರು – ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆರನೆಯ ವಾರದ ಸಸಿ ನೆಡುವ ಕಾರ್ಯಕ್ರಮ ಮುಂದುವರೆದ ಪರಿಸರ ಆಂದೋಲನ….ಒಂದು ಸಸಿಯನ್ನು ನೆಟ್ಟರೆ ಕನಿಷ್ಟ ಅದು ಇನ್ನೂರು ಜನರಿಗೆ ಆಮ್ಲಜನಕ ಕೊಡುತ್ತದೆ. ಹೀಗಿಯೇ ನೂರಾರು, ಸಾವಿರಾರು ನೆಡುವುದರಿಂದ ಮುಂದಿನ ದಿನಮಾನಗಳಲ್ಲಿ ಪ್ರಪಂಚಕ್ಕೆ ಆಮ್ಲಜನಕ ನೀಗುತ್ತದೆ. ಆ ನಿಟ್ಟಿನಲ್ಲಿ ವಿಶ್ವ ಬಂಧು ಪರಸರ ಬಳಗದ ಕಾರ್ಯ ಶ್ಲಾಘನೀಯ ಎಂದು ಎಸ್.ಕೆ.ಗುಗ್ಗರಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಗಣಿಹಾರ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ವಿಶ್ವ ಬಂಧು ಪರಿಸರ ಬಳಗ  ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿಗೆ  ನೀರೆರೆದು ಮಾತನಾಡುತ್ತಾ ಪರಿಸರದ ಅವನತಿಗೆ ಅಪರೋಕ್ಷವಾಗಿ ನಗರೀಕರಣದ ತೀವೃತೆಯೇ ಕಾರಣ. ಇನ್ನು ಮುಂದೆ ಪರಿಸರದ ಅವನತಿಯನ್ನು ತಡೆಗಟ್ಟಿ, ಸಮತೋಲನ ತರುವಲ್ಲಿ ಪ್ರಜ್ಞಾವಂತ  ನಾಗರೀಕರು ಸಹಕರಿಸಬೇಕು ಎಂದರು.

ಕಾವ್ಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ಚಂದ್ರಶೇಖರ್ ನಾಗರಬೆಟ್ಟ ಮಾತನಾಡಿ, ಆಮ್ಲಜನಕದ ಕೊರತೆಯಿಂದ ಕೋವಿಡ್ ನಂತಹ ಮಾಹಾಮಾರಿಗಳು ನಮ್ಮನ್ನು ಆಳುತ್ತಿವೆ. ಒಬ್ಬರ ಮುಖ ಒಬ್ಬರು ನೋಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಗಳು ದೂರಾಗಿವೆ.  ಈ ಎಲ್ಲ ಸಮಸ್ಯೆಗಳಿಗೆ ಪರಿಸರ, ಕಾಡು ಬೆಳೆಸುವುದೊಂದೆ ಪರಿಹಾರ ಎಂದರು.

ವಿಶ್ವ ಬಂಧು ಪರಿಸರ ಬಳಗದ ಸಂಚಾಲಕರಾದ ಸಿದ್ಧಲಿಂಗ ಚೌಧರಿ ಹಾಗೂ ಪತ್ರಕರ್ತ ಆನಂದ ಶಾಬಾದಿ ಮಾತನಾಡಿ ವರ್ಷದ ೫೨ ವಾರಗಳಲ್ಲಿ ಸಾವಿರಾರು  ಗಿಡಗಳನ್ನು ನೆಡುವ ಕಾರ್ಯ  ನಿರಂತರ ಸಾಗಲಿದೆ. ಇದು ಲಕ್ಷ ವೃಕ್ಷ ಅಭಿಯಾನವಾಗಿ ರಾಜ್ಯದಲ್ಲಿ ಮಾದರಿಯಾಗಲಿ ಆ ನಿಟ್ಟಿನಲ್ಲಿ ನಾವೆಲ್ಲರು ಕಾರ್ಯಪ್ರವೃತ್ತರಾಗೋಣ ಎಂದರು.

ಮುಖ್ಯ ಗುರುಗಳಾದ ಚ. ಮ ಮೇತ್ರಿ, ಮು, ಶಿಕ್ಷಕಿ ಎಸ್.ಎಮ್ ಮಸಳಿ  ಮಾತನಾಡಿದರು.  ಶಿಕ್ಷಕ ಡಿ.ಎಮ್ ಮಾವೂರ ಮಾವೂರ ಸ್ವಾಗತಿಸಿದರು. ಎಸ್.ಬಿ ಬಿರಾದಾರ ವಂದಿಸಿದರು. ಈ ಸಂದರ್ಭದಲ್ಲಿ ಕರೋನಾ ವಾರಿಯರ್ಸಗಳಾಗಿ ಸೇವೆ ಸಲ್ಲಿಸಿದ ರೇಕಾ ಹೊಸಮನಿ, ಮಮತಾಜ ಬಳಗಾನೂರ, ದೀಪಾ ಗುತ್ತರಗಿ, ಜ್ಯೋತಿ ಬಿರಾದಾರ, ಪ್ರೇಮಾ ಪವಾರ ಇವರನ್ನು ಸನ್ಮಾನಿಸಲಾಯಿತು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply