ಆನ್ ಲೈನ್ ಕ್ಲಾಸ್ ಬಂಕ್  ಮಾಡಿ ಕಾಂಗ್ರೆಸ್ ಪ್ರೊಟೆಸ್ಟ್ ಗೆ ಹಾಜರಾದ ಮಕ್ಕಳು..!

0

ಗದಗ – ಗದಗ ಜಿಲ್ಲೆಯ ನರಗುಂದ ನಗರದಲ್ಲಿ ಕಾಂಗ್ರೆಸ್ ಪಕ್ಷ ನೆಡೆಸಿದ ಪ್ರತಿಭಟನೆಯಲ್ಲಿ ಮಕ್ಕಳು ಭಾಗಿಯಾಗಿದ್ದು ಕಂಡುಬಂದಿದೆ.  ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡಿದ್ದು ಮತ್ತು ಸೈಕಲ್ ಗೆ ಪ್ಲೆಕ್ಸ್  ಕಾರ್ಡ್ ಹಾಕಿಕೊಂಡು ಪ್ರತಿಭಟನಾ ರ್ಯಾಲಿಯಲ್ಲಿ ಭಾಗಿಯಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು.

ಇನ್ನು ಕಾಂಗ್ರೆಸ್ ಮುಖಂಡರು ಸ್ವ ಇಚ್ಛೆಯಿಂದ ಪ್ರತಿಭಟನೆಗೆ ಬಂದಿದ್ದೇವೆ ಎಂದು ಮಕ್ಕಳ ಬಾಯಿಂದ  ಹೇಳಿಸುತ್ತಿದ್ದಾರೆ, ಎನ್ನುವ ಆರೋಪ ಸಹ ಕೇಳಿಬಂದಿದೆ.  ಪ್ರತಿಭಟನೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಿರೋದು ಕಂಡು ಬಂತು. ಸಂಭವನೀಯ ಮೂರನೇ ಅಲೆಯ ಮಧ್ಯೆ ಮಕ್ಕಳನ್ನ ರಸ್ತೆಗಿಳಿಸಿದ ಕಾಂಗ್ರೆಸ್.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply