ಬಾಗಲಕೋಟೆ-  ತೋಟಗಾರಿಕಾ ವಿವಿಯ ಉದ್ಯಾನಗಿರಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ವಿಜ್ಞಾನಿಗಳು ಭೂಮಿಯ ಗುಣಧರ್ಮಕ್ಕೆ ತಕ್ಕಂತ ಬೆಳೆಗಳ ಮಾಹಿತಿಯನ್ನು ರೈತರಿಗೆ ನೀಡಬೇಕು. ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ಆರೋಗ್ಯ ದೃಷ್ಠಿಯಿಂದ ಒಂದು ಕಡೆ ಲಾಭವಾದರೆ, ಆರ್ಥಿಕವಾಗಿ ಅಭಿವೃದ್ದಿ ಸಾಧಿಸಲು ಸಾಧ್ಯವಾಗುತ್ತಿದ್ದು, ಈ ಬಗ್ಗೆ ರೈತರಲ್ಲಿ ಒಲವು ಹೆಚ್ಚಿಸುವ ಕೆಲಸವಾಗಬೇಕೆಂದು ತಿಳಿಸಿದರು.

ತೋವಿವಿಯು ತೋಟಗಾರಿಕೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿಜ್ಞಾನಿಗಳು ಹೊಸ ಹೊಸ ತಳಿಗಳನ್ನು ಸಂಶೋಧನೆ ಮಾಡಿದ್ದಾರೆ. ರೈತರಲ್ಲಿ ಆತ್ಮ ವಿಶ್ವಾಸಿ ಹೆಚ್ಚಿಸುವ ಮೂಲಕ ಸಂಶೋಧನೆಗಳ ಮಾಹಿತಿ ವಿನಿಮಯವಾಗುವ ಕೆಲಸವಾಗಬೇಕು. ಕೃಷಿಕರ ಜೀವನ ಬದಲಾವಣೆಗೆ ಕೇಂದ್ರ ಸರಕಾರ ಕಿಸಾನ ಸಮ್ಮಾನ್, ಫಸಲ್‍ಭೀಮಾ ಯೋಜನೆಯಂತಹ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿ ಅಭಿವೃದ್ದಿಗೆ ಹೆಚ್ಚು ಒಲವು ತರಲು ಪ್ರಯತ್ನ ನಡೆದಿದೆ ಎಂದು ಹೇಳಿದರು.

Leave A Reply