ಕೊಪ್ಪಳ- ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳ ನಿದ್ದೆ ಗೆಡಿಸಿದೆ. ಇಬ್ಬರು ಯುವಕರನ್ನು ಬಲಿ ಪಡೆದು ಕೊಂಡ ನರಭಕ್ಷಕ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಆಪರೇಷನ್‌ ಎಲಿಫಂಟ್ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಐತಿಹಾಸಿಕ ಸ್ಥಳ ಎಂದು ಗುರುತಿಸಿ ಕೊಂಡಿರುವ ತಾಲೂಕಿನ ಅನೆಗೊಂದಿ ಭಾಗದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಮೂರು ತಿಂಗಳಿಂದ ಕಾಣಿಸಿಕೊಳ್ಳುತ್ತಿರುವ ಚಿರತೆ ಮನುಷ್ಯರ ಮೇಲೆ ದಾಳಿ ನಡೆಸುವ ಮೂಲಕ ನರಭಕ್ಷಕ ಚಿರತೆಯಾಗಿ ಮನುಷ್ಯರನ್ನು ಭೇಟೆಯಾಡುತ್ತಿದೆ. ಎರಡು ತಿಂಗಳಿನಲ್ಲಿ ಆನೆಗೊಂದಿ ದುರ್ಗಾ ದೇವಿ ದೇವಸ್ಥಾನ ಅಡುಗೆ ಸಹಾಯಕ, ಕರಿಯಮ್ಮ ಗಡ್ಡಿಯ ಆಡು ಕಾಯುವ ಯುವಕರನ್ನು ಬಲಿ ಪಡೆದುಕೊಳ್ಳುವುದು ಅಷ್ಟೇ  ಅಲ್ಲದೆ ಜಂಗ್ಲಿ ಗ್ರಾಮ ಅಜ್ಜಿ ಹಾಗೂ ಸಂಗಾಪೂರ ಗ್ರಾಮ ಬಾಲಕನ ಮೇಲೂ ದಾಳಿ ಮಾಡಿ ಗಂಬೀರ ಗಾಯಗೊಳಿಸಿದೆ. ನರಭಕ್ಷಕ ಚಿರತೆ ಸೆರೆಗ ಅರಣ್ಯ ಇಲಾಖೆಯವರು ನೂರಿತ ವನ್ಯ ಜೀವಿ ತತ್ಞರನ್ನು ಕರೆಸಿ, ಸರ್ವ್ ನಡೆಸಿ ಬೋನಗಳ ಅಳವಡಿಸಲಾಗಿತ್ತು. ಅಷ್ಟೇ ಅಲ್ಲದೆ ಟ್ರ್ಯಾಪ್ ಕ್ಯಾಮಾರಗಳನ್ನು ಹಾಕಿ, ಚಿರತೆಯ ಚಲನ ವಲನದ ಮೇಲೆ ನಿಗಾ ವಹಿಸಿದ್ದರು. ಹಾಕಿರುವ ಬೋನಗೆ ಎರಡು ಚಿರತೆಗಳು ಸೆರೆಯಾಗಿದ್ದರು , ನರಭಕ್ಷಕ ಚಿರತೆ ಮಾತ್ರ ಅಧಿಕಾರಿಗಳನ್ನು ಕಣ್ಣು ತಪ್ಪಿಸಿ, ಮನಷ್ಯರ ಮೇಲೆ ದಾಳಿ ನಡೆಸುತ್ತಿರುವುದು ಮುಂದೆವರೆಸಿದೆ.  ಇದರಿಂದ ಸಾವ೯ಜನಿಕರು ಹಗಲಿನಲ್ಲಿ ತಿರುಗಾಡಲು ಭಯ ಪಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಜನರ ಭಯದಿಂದ ಪ್ರತಿಭಟನೆಗೂ ಇಳಿದಿರುವ ಸನ್ನಿವೇಶಗಳು ನಡೆದಿವೆ. ಈ ಹಿನ್ನಲೆಯಲ್ಲಿ ಆಪರೇಷನ್‌ ಎಲಿಫೆಂಟ್ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ನರಭಕ್ಷಕ ಚಿರತೆ ಮನುಷ್ಯರ ಮೇಲೆ ಏಕಾಏಕಿ ದಾಳಿ ಮಾಡುತ್ತಿರುವುದರಿಂದ ಶಿವಮೊಗ್ಗ ಜಿಲ್ಲೆಯ ಸಕ್ಕರೆಬೈಲೂ ಆನೆ ಬಿಡರದ ನೂರಿತ ಆನೆಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.  ಚಿರತೆ ಸೆರೆಗೆ ವಿಶೇಷ ನೆರವಾಗುವ ರೀತಿಯಲ್ಲಿ ತರಬೇತಿಯನ್ನು ಪಡೆದು ಕೊಂಡಿರುವ ಆನೆಗಳನ್ನು ಬಳಕೆಯ ಜೊತೆಗೆ 8 ಜನ ಚಿರತೆಯ ಸೆರೆ ಹಿಡಿಯುವ ತತ್ಞರು ಬಿಡು ಬಿಟ್ಟಿದ್ದಾರೆ. ಚಿರತೆಯ ವಾಸನೆಯನ್ನು ಗ್ರಹಿಸಿ, ಚಿರತೆ ಇರುವ ಸ್ಥಳವನ್ನು ಗುರುತಿಸುವ ಸಾಮಾಥ್ಯ೯ ವನ್ನು ಹೊಂದಿವೆ. ಇನ್ನೂ ಅಷ್ಟೇ ಅಲ್ಲದೆ ಚಿರತೆಯೂ ಕೂಡ ಆನೆ ವಾಸನೆಯನ್ನು ಗ್ರಹಿಸಿ, ಆ ಸ್ಥಳ ಬದಲಾವಣೆಯನ್ನು ಮಾಡಿ, ದೂರ ಹೋಗಲು ಹೊರ ಬರುತ್ತದೆ. ಚಿರತೆ ಹೊರ ಬರುವುದನ್ನು ಕಾಯತ್ತಿರುವ ಆನೆ ಮೇಲೆ ಕುಳಿತುಕೊಂಡಿರುವ ನೂರಿತ ಅರವಳಿಕೆ ತಜ್ಞರು ಗನ್ ನಿಂದ ಶೂಟ್ ಮಾಡಿ, ಅರವಳಿಗೆ ಮದ್ದು ನೀಡುವ ಮೂಲಕ ಚಿರತೆ ಸೆರೆ ಹಿಡಿಯಲಾಗುವುದು. ಈಗಾಗಲೇ ಎರಡು ಆನೆಗಳು ಹಾಗೂ 8 ಜನರ ತಂಡ ಬಿಡಾರ ಹುಡಿದ್ದು, ಚಿರತೆ ಸಂಚಾರಿಸುವ ಜಾಗ, ಅದರ ಹೆಜ್ಜೆ ಗುರುತು, ದಾಳಿ ಮಾಡಿರುವ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದಾರೆ.

About Author

Priya Bot

Leave A Reply