ಕಾಶ್ಮೀರ- ಭೂಲೋಕದ ಸ್ವರ್ಗ ಎಂದೇ ಹೆಸರಾಗಿರುವ ಕಾಶ್ಮೀರದಲ್ಲಿಯ ರಸ್ತೆಗಳನ್ನು ಮೇಲದರ್ಜೆಗೆ ಏರಿಸುವ ಸಲುವಾಗಿ ಕೇಂದ್ರ ಸರ್ಕಾರ ಹಲವಾರೂ ಯೋಜನೆಗಳನ್ನು ರೂಪಿಸಿದೆ. ಪ್ರವಾಸಿರನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿಗರಿಗೆ ಯಾವುದೇ ರೀತಿಯ ಕುಂದುಕೊರತೆಗಳು ಉಂಟಾಗಬಾರದು ಎಂದು ಕೇಂದ್ರ ಸರ್ಕಾರ ಲೇಹ್ ದಿಂದ ಕಾರ್ಗಿಲ್ ವರೆಗಿನ ರಸ್ತೆಯನ್ನು ಸುಧಾರಿಸುವಲ್ಲಿ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಕೇಂದ್ರ ಸಂಸ್ಕ್ರತಿ ಮತ್ತು ಪ್ರವಾಸೋದ್ಯಮ ಇಲಾಖೆಯು ಈ ಯೋಜನೆಯನ್ನು ಸಿದ್ದಪಡಿಸಿವೆ. ಲೇಹ್ ದಿಂದ ಕಾರ್ಗಿಲ್ ವರೆಗಿನ 230 ಕಿ,ಮೀ, ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಲೇಹ್ ಮತ್ತು ಕಾರ್ಗಿಲ್ ನ್ನು ಪ್ರವಾಸಿ ತಾಣವನ್ನಾಗಿ ಗುರುತಿಸುವಲ್ಲಿ ಕೇಂದ್ರ ಸರ್ಕಾರ ಬಹು ಮುಖ್ಯ ಪಾತ್ರ ವಹಿಸುತ್ತಿದೆ. ವಿದೇಶದಿಂದ ಬರುವ ಭಾರತೀಯರಿಗೆ ಈ ಪ್ರದೇಶಗಳ ಮೇಲಿನ ಎಲವು ಹೆಚ್ಚಾಗಲಿ ಮತ್ತು ಈ ಸ್ಥಳಗಳಿಗೆ ಬೇಟಿ ನೀಡಬೇಕೆಂಬ ಬಯಕೆಯನ್ನು ಹುಟ್ಟಿಸುವ ಸಲುವಾಗಿ ಲೇಹ್ ಮತ್ತು ಕಾರ್ಗಿಲ್ ರಸ್ತೆ ಮತ್ತು ಉತ್ತಮವಾದ ವಾತಾವರಣವನ್ನು ಕಲ್ಪಿಸಿಕೊಟ್ಟಾಗ ವಿದೇಶದಿಂದ ಬರುವ ಭಾರತೀಯರಿಗೆ ಸಂತೋಷ ದೊರೆಯುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಅಭಿಪ್ರಾಯ ಪಟ್ಟಿದೆ.
ಲೇಹ್ ನಿಂದ ಕಾರ್ಗಿಲ್ ಗೆ ಹೋಗುವ ಮಾರ್ಗದಲ್ಲಿ ಸಾರ್ವಜನಿಕರಿಗೆ ಯಾವುದೇ ಸೌಲಭ್ಯಗಳಿಲ್ಲ, ಕನಿಷ್ಟ ವೈದ್ಯಕೀಯ ಸೌಲಭ್ಯವು ದೊರೆಯುವುದಿಲ್ಲ. ಈ ಪ್ರದೇಶದಲ್ಲಿ ಸಾರ್ವಜನಿಕರಿಗೆ ಹೆಚ್ಚಾಗಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಹಾಗಾಗೀ ಇಲ್ಲಿ ಪ್ರತಿ 20-25 ಕಿ,ಮೀ, ಒಂದೊಂದು ಆಮ್ಲಜನಕ ಪಾರ್ಲರ್ ಗಳನ್ನು ತೆರೆಯಬೇಕೆಂದು ಅಲ್ಲಿನ ಸ್ಥಳೀಯ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.