ಉಪನಯನ ಅಥವಾ ದೀಕ್ಷೆ

0

ಡಾ. ಈಶ್ವರಾನಂದ ಸ್ವಾಮೀಜಿ

ಉಪನಯನ ಅಥವಾ ದೀಕ್ಷೆ ಎಲ್ಲರಿಗೂ ಲಭ್ಯವಿಲ್ಲ. ಅದು ಗುರುವಿನ ಅಂತಃಕರಣದಿಂದ ಸಿಗುವಂತದ್ದು. ಗುರುವಿನ ಸೇವಾದಿ ಮೂಲಕ ಜೋತೆಗೆ ಪರೀಕ್ಷೆ ಮಾಡಿ ತೃಪ್ತಿ ಹೋಂದಿದ ನಂತರ ದೊರೆಯುವುದು. ಗೀತೆ- “ಪರಿಪ್ರಶ್ನೇನ ಸೇವಯಾ” ಎಂಬಂತೆ.
ಒಮ್ಮೆ ಒಬ್ಬ ವ್ಯಕ್ತಿ ಗುರುವಿನ ಹತ್ತಿರ ಬಂದು ತನಗೆ ದೀಕ್ಷೆ ಕೊಡಬೇಕೆಂದು ಕೇಳಿದನು. ಆಗ ಗುರುಗಳು ಅವನ ಪರೀಕ್ಷೆ ಮಾಡುವಗೊಸ್ಕರ ಇನ್ನೊಬ್ಬ ಸಂತನ ಹತ್ತಿರ ಖಳಿಸಿದನು. ಹೋಗುವಾಗ ಅವನಿಗೊಂದು ಚಿಕ್ಕದಾಗಿರುವ ಒಂದು ಡಬ್ಬಾ ಕೊಟ್ಟು ಇದು ತಗೆದುಕೊಂಡು ಹೋಗು ನನ್ನ ಸ್ನೇಹಿತನಿಗೆ ಕೊಡು. ಆದರೆ, ಇದನ್ನು ತೆಗೆದು ನೊಡುವುದಾಗಲಿ ಮಾಡಬಾದು ಇದು ಅತ್ಯಂತ ಮಹತ್ವವಾದ ವಸ್ತುವಾಗಿದೆ. ನದಿದಾಟುವಾಗ ಹುಶಾರದಿಂದ ದಡ ಸೇರಬೇಕು. ಎಂದು ಜಾಗೃತದ ಮಾತುಗಳು ಹೇಳಿ ಖಳಿಸಿದನು. ಆದರೆ ಇವನು ಸಂತನ ಸ್ನೇಹಿತನ ಹತ್ತಿರ ಹೋಗುವಾಗ ಈ ಡಬ್ಬಾದಲ್ಲಿ ಏನಿರಬಹುದು? ಗುರುಗಳು ನೊಡಬಾರದೆಂದು ಹೇಳಿದ್ದಾರೆ. ಇದು ಮಹತ್ವದ ವಸ್ತು ಎಂದು ಹೇಳಿದ್ದಾರೆ.

ಒಂದುಕಡೆ ಕುತುಹಲವಾದರೆ ಇನ್ನೊಂದು ಕಡೆ ಗುರುವಾಕ್ಯ ಮೀರಿದಂತಾಗುತ್ತದೆ ಎಂದು ಯೋಚಿಸತೊಡಗಿದನು. ಆದರೆ ಕೊನೆಗೆ ನಿರ್ಧಾರಕ್ಕೆ ಬಂದು ನಾನು ತೆಗೆದು ನೊಡಿದ್ದು ಅವರಿಗೆ ಗೊತ್ತಾಗುವುದಿಲ್ಲ. ಎಂದು ಡಬ್ಬಾ ತೆರೆದು ನೊಡಿದನು. ತಕ್ಷಣ ಅದರಲ್ಲಿರುವ ಒಂದು ಪುಟ್ಟ ಇಲಿ ಮರಿ ನೆಗೆದು ಹೊರ ಹೊಯಿತು. ಅಯ್ಯೊ ಘಾತವಾಯಿತ್ತಲ್ಲ ಎಂದು ಖೇದಪಟ್ಟು ಹಿಡಿಯಲು ಹೊದನು ಸಿಗಲಿಲ್ಲ. ಇದೇನು ಮಹತ್ವದೇನು ಯಾರಾದರು ಸ್ನೇಹಿತರಿಗೆ ಇಲಿ ಕೊಡ್ತಾರೆಯೇ? ನಾನು ಮರಳಿ ಹೋಗಬೇಕೇ? ಇಲ್ಲಿ ನಡೆದ ಘಟನೆ ಹೋಗಿ ಹೇಳಲಿ ಹೇಗೋ? ಹೀಗೆ ನಾನಾ ರೀತಿಯಿಂದ ಮನದಲ್ಲಿ ಚಿಂತಿಸಿ ಸಂತನ ಸ್ನೇಹಿತನ ಹತ್ತಿರ ಹೋಗಿ ಮೋರೆ ಸಪ್ಪೆ ಮಾಡಿಕೊಂಡು ನಿಂತನು ಅದನ್ನು ಕಂಡು ಹೇಳಿದರು ನನ್ನ ಸ್ನೇಹಿತ ಸಂತರು ಖಳಿಸಿದ್ದಾರೆ. ಆದರೆ ತೆರೆದು ನೊಡಬಾರದೆಂದು ನಿನ್ನ ಕೈಯಲ್ಲಿ ಡಬ್ಬಾ ಖಳಿಸಿದ್ದರು.

ಆದರೆ ನೀನು ನಿನ್ನ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾರದೆ. ಅದನ್ನು ತೆರೆದು ನೋಡಿದೆ ಅದರಲ್ಲಿರುವ ಇಲಿ ನೆಗೆದು ಹೋಗಿದೆ. ಅದಕ್ಕೆ ನೀನೇನು ಚಿಂತಿಸಬೇಡ. ಇದು ನಿನ್ನ ಪರೀಕ್ಷೆಯಾಗಿತ್ತು. ಆದರೆ ಅದರಲ್ಲಿ ನೀನು ತೆರ್ಗಡೆಯಾಗಲಿಲ್ಲ. ಏಕೆಂದರೆ ಗುರು ಮಾತಿಗೆ ನೀನು ಗೌರವ ಕೊಡಲಿಲ್ಲ. ಖಾಲಿ ಡಬ್ಬಾ ತಂದು ನನ್ನ ಕೈಯಲ್ಲಿ ಕೊಟ್ಟರೆ ನಾನೇನು ಮಾಡಲಿ ಹೀಗೆ ಮಾತನಾಡುವುದನ್ನು ಆ ವ್ಯಕ್ತಿ ತೆರೆದ ಕಣ್ಣು ಬಾಯಿಯಿಂದ ಆ ಮಾತುಗಳು ಕೇಳಿ ತನ್ನ ಮನದಲ್ಲಿ ಆಲೋಚಿಸಿದನು ಇವರಿಗೆ ಹೇಗೆ ಗೊತ್ತಾಯಿತು. ಗುರುಗಳೇ, ಕ್ಷಮಿಸಿ ಎಂದನು. ಆದರೆ ನಿನಗೆ ಈ ಜನ್ಮದಲ್ಲಿ ಉಪನಯನ ದೀಕ್ಷೆ ಇಲ್ಲ. ಮರಳಿ ಮನೆಗೆ ಹೋಗು ಎಂದರು ಏಕೆ ಗುರುಗಳೆ? ಆಗ ಸಂತನ ಸ್ನೇಹಿತನು ಚಿಕ್ಕ ಇಲಿಯನ್ನು ರಕ್ಷಿಸಲಾರದ ನೀನು ಕಾಮ ಕ್ರಾಧಾದಿಗಳಿಂದ ಆವೃತವಾಗಿ ಬಲಾಢ್ಯ ಹೊಂದಿರುವ ನಿನ್ನ ಮನಸ್ಸನ್ನು ಹೇಗೆ ನಿಗ್ರಹಿಸುವೆ? ಎಂದರು.
ಹಾಗೆಯೇ ನಮ್ಮ ಮನಸ್ಸು ಇಂದ್ರಿಯಗಳನ್ನು ನಮ್ಮ ನಿಯಂತ್ರಣದಲ್ಲಿ ಇಡಲಾಗದಿದ್ದರೆ ಕೇವಲ ಉಪನಯನ, ಗುರುದೀಕ್ಷೆಯ ಪಡೆದು ನಾನು ಶಿಷ್ಯ ಅಥವಾ ಗುರುವೆಂದು ಹೇಳುವವರು ಜಗದಲ್ಲಿ ಬಹಳಷ್ಟು ಜನರು ತುಂಬಿಕೊಂಡಿದ್ದಾರೆ.

ಅವರಿಗೆ ಎಲ್ಲಿಯೂ ಸುಖವಿಲ್ಲ. ಎನ್ನವರು ದಾಸಿಮಯ್ಯನವರು-
ಹೊಲಬನರಿಯದ ಗುರು, ಸುಲಭನಲ್ಲದ ಶಿಷ್ಯ
ಕೆಲಬಲನ ನೋಡದುಪದೇಶ
ಅಂಧಕನ ಲಾಭ ಹೊಕ್ಕಂತೆ ಕಾಣಾ ರಾಮನಾಥ.
ಅಂದರೆ ಅರಿಯದ ಗುರು ಅರಯದ ಶಿಷ್ಯಗೆ ತಂದು ಉಪದೇಶವ ಮಾಡಿದರೆ ಅಂಧರ ಕೈ ಅಂಧಕ ಹಿಡಿದಂತಾಗುತ್ತದೆ.
ಬವಣ್ಣನವರು ಸಹ-
ಇಲ್ಲಿಯೂ ಸಲ್ಲವವರು ಅಲ್ಲಿಯೂ ಸಲ್ಲುವರಯ್ಯಾ
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ. ಎಂದು ಹೇಳಿದ್ದಾರೆ. ಎಂದಿದ್ದಾರೆ.

ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಸಂಪ್ರದಾಯಸ್ತರು ಅವರದೆಯಾದ ಉಪನಯನ ಅಥವಾ ದೀಕ್ಷಾ ಪದ್ಧತಿಯನ್ನು ಅನುಸರಿಕೊಂಡು ಬರುವುದನ್ನು ಕಾಣುತ್ತೇವೆ. ಹಾಗೆಯೇ ದೇವಾಂಗ ಸಂಪ್ರದಾಯದಲ್ಲಿ ಉಪನಯನ ಅಥವಾ ದೀಕ್ಷಾ ಎನ್ನುವುದು ಪ್ರಾರಂಭದ ಮೆಟ್ಟಿಲು. ಇದು ಹದಿನಾರು ಸಂಸ್ಕಾರಗಳಲ್ಲಿ ಒಂದಾಗಿದೆ.
ಉಪನಯನ ಸಂಸ್ಕಾರದಿಂದ ಬ್ರಹ್ಮಚರ್ಯಾಶ್ರಮವು ಪ್ರಾರಂಭವಾಗುವುದು. ಈ ಸಂಸ್ಕಾರವನ್ನು ಹೊಂದಿದ ಬಾಲ್ಯಾವಸ್ಥೆಯ ಕುಮಾರನು ಶುದ್ಧನಾಗಿ ಗುರುಕುಲದಲ್ಲಿ, ಗುರುಗಳ ಸನ್ನಿಧಾನದಲ್ಲಿ ಅಧ್ಯಯನ, ಅಧ್ಯಾಪನ ಮಾಡುತ್ತ ಬ್ರಹ್ಮಚರ್ಯ ವೃತವನ್ನು ಕೈಗೊಂಡು ತಪೋಮಯ ಜೀವನವನ್ನು ರೂಪಿಸಿಕೊಳ್ಳುತ್ತಾನೆ. ಆದುದರಿಂದ ಉಪನಯನ ಸಂಸ್ಕಾರವು ವೈಶಿಷ್ಟ್ಯಪೂರ್ಣವಾಗಿದೆ. ಈ ಸಮಸ್ಕಾರಕ್ಕೆ ಬ್ರಹ್ಮೋಪದೇಶ, ಮುಂಜಿವೆ, ಮೊದಲಾದ ಹೆಸರುಗಳಿಂದ ಕರೆಯುತ್ತಾರೆ.

“ಆಚಾರ್ಯ ಸಮೀಪೇ ನೀಯತೇ ತತ್ ಉಪನಯನಮ್” ಅಂದರೆ ವೇದಾದಿ ಸಂಸ್ಕಾರದಿಂದ ಆಚಾರ್ಯರ ಸಮೀಪ ಕರೆದುಕೊಂಡು ಹೋಗುವುದೇ ಉಪನಯನ. ಇಲ್ಲಿ ‘ಉಪ’ ಮತ್ತು ‘ನಯನ’ ಎಂಬ ಎರಡು ಪದಗಳಿಂದ ಸಮಾಸಗೊಂಡ ಉಪನಯನ ಪದವಾಗಿದೆ. ಉಪವೆಂದರೆ ಸಮೀಪ, ನಯನ ಎಂದರೆ ಕರೆದೊಯ್ಯುವದು. ಕೌಮಾರ್ಯಾವಸ್ಥೆಯ ಬಾಲಕನನ್ನು ಗುರು ದೀಕ್ಷಾದಿ ಸಂಸ್ಕಾರದಿಂದ ಸಂಸ್ಕರಿಸಿ ಗುರುಕುಲದಲ್ಲಿ ಇಟ್ಟುಕೊಂಡು, ವೇದಾದಿ ಆಗಮಗಳು, ಧರ್ಮ ಸಂಸ್ಕಾರಗಳನ್ನು ತಿಳಿಸುವ ಸ್ಮøತಿಗಳು ಗುರುಮುಖದಿಂದ ಅಧ್ಯಯನ ಮಾಡಿಕೊಂಡು ಗುರುಮಾರ್ಗದರ್ಶನವನ್ನು ಹೊಂದಿ ದೇವರ ಸಮೀಪಕ್ಕೆ ಕರೆದೊಯ್ಯುವುದು ಎಂಬುದು ಉಪನಯದ ಅರ್ಥವಾಗಿದೆ.

“ನಹಿ ಅಸ್ಮಿನ್ ಯುಜ್ಯತೇ ಕರ್ಮ ಕಿಂಚಿದಾಮೌಂಜೀ ಬಂಧನಾತ್” ಎಂಬ ಮನುಸ್ಮøತಿಯ ವಾಕ್ಯದಂತೆ ಉಪನಯದಿಂದ ಸಂಸ್ಕಾರವಾದ ಮಾನವನಿಗೆ ಯಾವುದೇ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಹಾಗೂ ಅಧಿಕಾರವಿಲ್ಲ ಎನ್ನಲಾಗಿದೆ. ಮತ್ತು “ಜನ್ಮಾನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ” ಎಂಬಂತೆ ಉಪನಯನ ಸಂಸ್ಕಾರವಾಗದೆ ಇದ್ದರೆ ಆ ವ್ಯಕ್ತಿಯು ಶೂದ್ರನೇ ಆಗಿರುತ್ತಾನೆ. ಸಂಸ್ಕಾರದ ನಂತರ ದ್ವಿಜನಾಗುತ್ತಾನೆ. ಅಂದರೆ ಗುರುವಿನ ಹಸ್ತ ಶಿಷ್ಯನ ಮಸ್ತಕ ಸಂಯೋಗದಿಂದ ಮಂತ್ರೋಪದೇಶದ ಮೂಲಕ ಮರುಜನ್ಮವನ್ನು ನೀಡಿ ಪವಿತ್ರನನ್ನಾಗಿ ಮಾಡುತ್ತಾನೆ.
“ಅಷ್ಟಾವರ್ಷಂ ಬ್ರಾಹ್ಮಣಮುಪನೀತ, ತಮರ್ಧಯಾಪಯಿತ” ಎಂಬ ಶೃತಿ ವಾಕ್ಯದಂತೆ ಎಂಟನೆಯ ವರ್ಷಕ್ಕೆ ಉಪನಯನ ಸಂಸ್ಕಾರಕ್ಕೆ ಉತ್ತಮವಾದ ಸಮಯವಾಗಿದೆ. ಸರಿಯಾದ ವಯಸ್ಸಿಗೆ ಅಥವಾ ಕಾಲಕ್ಕೆ ಉಪನಯನ ಸಂಸ್ಕಾರ ನೆರವೇರಿಸದಿದ್ದರೆ ಅವನಿಗೆ ಸಂಸ್ಕಾರ ಎಂದು ಶಾಸ್ತ್ರಗಳು ಹೇಳುತ್ತವೆ.

ಉಪನೀಯ ಗುರುಃ ಶಿಷ್ಯಂ ಶಿಕ್ಷಯೇತ್ ಶೌಚಮಾದಿತಃ |
ಆಚಾರಮಗ್ನಿಕಾರ್ಯಂ ಚ ಸಂಧ್ಯೋಪಾಸನಮೇವಚ ||
ಉಪನಯನ ಸಂಸ್ಕಾರವನ್ನು ಮಾಡಿದ ಗುರುವು ಶಿಷ್ಯನಿಗೆ ಶೌಚ ಸದಾಚಾರಗಳನ್ನು ಮತ್ತು ಸಂಧ್ಯೋಪಾಸನೆಯ ವಿಧಿಗಳನ್ನು ತಿಳಿಸಿ ಆತನನ್ನು ಅನುಷ್ಠಾನಪರನನ್ನಾಗಿ ಮಾಡಬೇಕು.
ಮೇಖಲಾಮಜಿನಂ ದಂಡಮುಪನೀತಂ ಚ ನಿತ್ಯ ಶ್ವಃ |
ಕೌಪೀನಂ ಕಟಿಸೂತ್ರಂ ಚ ಬ್ರಹ್ಮಚಾರೀತು ಧರಯೇತ್ ||
ಅಗ್ನೀಂಧನಂ ಭೈಕ್ಷಚರ್ಯಮಧಃ ಶಯ್ಯಂ ಗುರೋರ್ಹಿತಮ್ |
ಆಸಮಾವರ್ತನಾತ್ ಕುರ್ಯಾತ್ ಕೃತೋಪನಯನೋದ್ವಿಜಃ ||

ಈ ಪ್ರಮಾಣದಿಂದ ವಟುವು ಮೇಖಲಾ, ಅಜಿನ, ದಂಡ, ಉಪವೀತ, ಕೌಪೀನ, ಕಟಿಸೂತ್ರಗಳನ್ನು ಧಾರಣೆ ಮಾಡಬೇಕು. ನಿತ್ಯದಲ್ಲಿಯೂ ಸಂಧ್ಯಾವಂದನೆ ಮಾಡಬೇಕು. ಅಗ್ನಿಕಾರ್ಯ, ಭಿಕ್ಷೆ ಮಾಡುವುದು, ಗುರುಹಿತವಾಕ್ಯ ಪಾಲನೆ ಮಾಡುವುದು, ಅಧಃ ಶಯನಯಮಾಡಬೇಕು ಎಂದು ಈ ಮೇಲಿನ ಮಂತ್ರದಿಂದ ತಿಳಿದು ಬರುತ್ತದೆ.
ಉಪನಯನವಾದ ನಂತರ ಉತ್ತಮ ಕಾಲದಲ್ಲಿ ಅಂದರೆ ಪಂಚಾಂಗದಲ್ಲಿ ತಿಳಿಸಿದ ದಿನದಂದು ಉಪಾಕರ್ಮವನ್ನು ಆಚರಿಸಿ ಆ ಸಂದರ್ಭದಲ್ಲಿ ಉಪವೀತ, ಅಜಿನ, ಮೇಖಲಾ, ದಂಡಾದಿಗಳನ್ನು ವಿಸರ್ಜನೆ ಮಾಡಿ ಪುನಃ ಹೊಸತಾಗಿ ಉಪವೀತ, ಅಜಿನಾದಿಗಳನ್ನು ಧಾರಣೆ ಮಾಡಬೇಕು. ಹೀಗೆ ಉಪಾಕರ್ಮವನ್ನು ಆಚರಿಸಿದ ನಂತರ ಶುಭಮುಹೂರ್ತದಲ್ಲಿ ಗುರುವಿನ ಹತ್ತಿರ ಹೋಗಿ ವೇದಾಧ್ಯಯನಾದಿಗಳನ್ನು ಮಾಡಬೇಕು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply