ಕೋವಿಡ್ ನಿಂದ ರಾಜ್ಯದಲ್ಲಿ ೩೧ ಅನಾಥ ಮಕ್ಕಳು; ಶಶಿಕಲಾ ಜೊಲ್ಲೆ.

0

ರಾಯಚೂರು – ಕೊರೋನಾ ಅಲೆಯಿಂದ ಅನಾಥವಾದ ಮಕ್ಕಳೊಂದಿಗೆ ವೀಡಿಯೋ ಸಂವಾದ ಮಾಡಿ, ನಿಮ್ಮ ಜತೆ ಸರ್ಕಾರವಿದೆ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದು ಶಶಿಕಲಾ‌ ಜೊಲ್ಲೆ ತಿಳಿಸಿದ್ದಾರೆ. ಇಂದು ರಾಯಚೂರು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿ ಮಾತನಾಡುತ್ತಾ, ಕೊರೊನಾ ಮೂರನೇ ಅಲೆ ಆತಂಕ ಇರುವುದ ರಿಂದ ಆರು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ.

ಅನಾಥ ಮಕ್ಕಳ ಜತೆ ವಿಡಿಯೋ ಸಂವಾದ ಕೂಡ ಮಾಡಿದ್ದೇನೆಂದು ತಿಳಿಸಿದರು. ರಾಜ್ಯದಲ್ಲಿ ಅನೇಕ ಮಧ್ಯಮ ವರ್ಗದ, ಬಡವರ ಮಕ್ಕಳು ಅನಾಥವಾಗಿದ್ದಾರೆ. ಸದ್ಯ 31 ಮಕ್ಕಳು ಸಂಬಂಧಿಕರ ಪೋಷಣೆಯಲ್ಲಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವವರು ಇಲ್ಲವೆಂದರೆ ಅನಾಥ ಮಕ್ಕಳನ್ನು ದತ್ತು ಸ್ವೀಕಾರ ಕೇಂದ್ರಕ್ಕೆ ಶಿಫ್ಟ್ ಮಾಡಲಾಗುವುದು. ಅನಾಥ ಮಕ್ಕಳ ಎಲ್ಲ ಜವಾಬ್ದಾರಿಯನ್ನು ನಮ್ಮ ಇಲಾಖೆ ವಹಿಸಲಿದೆ ಎಂದರು.

ಕೋವಿಡ್ ನಂತರ ಮಕ್ಕಳಿಗೆ ಕೆಲವು ತೊಂದರೆ ಕಾಣಿಸಿಕೊಂಡಿದೆ. ಈ ಕುರಿತು ಆರೋಗ್ಯ ಸಚಿವರ ಜತೆಗೆ ಚರ್ಚೆ ನಡೆಸಿದ್ದೇನೆ. ಮಕ್ಕಳ ಚಿಕಿತ್ಸೆಗೆ ಬೇಕಾದ ಔಷಧಿ ಸೇರಿದಂತೆ ಇತರೆ ಸಿದ್ಧತೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ಮಕ್ಕಳಿಗೆ ಬೇಕಾದ ಔಷಧಿಯಲ್ಲಿ ಏನೂ ಕೊರತೆ ಇಲ್ಲ ಎಂದು ಹೇಳಿದರು. ಇನ್ನು 3ನೇಯ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ, ಎಲ್ಲ ಜಿಲ್ಲೆಯಲ್ಲಿಯೂ ತಜ್ಞ ವೈದ್ಯರ ನೇಮಕಾತಿ, ಪ್ರತ್ಯೇಕ ಮಕ್ಕಳ ಕೋವಿಡ್ ವಾರ್ಡ್ ಗಳನ್ನು ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply