ಆಸ್ಕರ್ ಫರ್ನಾಂಡೀಸ್ ಆರೋಗ್ಯ ಸ್ಥಿತಿ ಗಂಭೀರ

0

ಮಂಗಳೂರು

ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನ ಹಿರಿಯ ಮುಖಂಡ ಆಸ್ಕರ್ ಫರ್ನಾಂಡೀಸ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಯೋಗ ಮಾಡುವಾಗ ಕಾಲು ಜಾರಿ ಬಿದ್ದು ತೀವ್ರ ಪೆಟ್ಟಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಆಸ್ಕರ್ ಫರ್ನಾಂಡೀಸ್ ಆರೋಗ್ಯ ಸ್ಥಿತಿಯನ್ನು ತಿಳಿಯಲು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಆಸ್ಕರ್ ಕುಟುಂಬಕ್ಕೆ ಕರೆ ಮಾಡಿ ವಿಚಾರಿಸಿದ್ದಾರೆ. ಅಲ್ಲದೆ ಆಸ್ಕರ್ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ. ಇನ್ನು ‌ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ದಾಖಲಾಗಿರುವ   ಆಸ್ಪತ್ರೆಗೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಭೇಟಿ‌ ನೀಡಿದರು.

ಇದೇ ವೇಳೆ ಮಾತನಾಡಿದ ಅವರು, ಆಸ್ಕರ್ ರಿಗೆ ಸದ್ಯ ಪರಿಣಿತ ತಜ್ಞ ವೈದ್ಯರ ತಂಡ ಚಿಕಿತ್ಸೆ ಕೊಡ್ತಿದೆ. ಮಣಿಪಾಲ್ ವೈದ್ಯರು ಸೇರಿದಂತೆ ಬೇರೆ ಬೇರೆ ತಜ್ಞ ವೈದ್ಯರು ಚಿಕಿತ್ಸೆ ಕೊಡ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕ ಅವರ ಕುಟುಂಬದ ಜೊತೆ ಮಾತನಾಡಿದ್ದಾರೆ. ಪೇಜಾವರ ಸ್ವಾಮೀಜಿಗಳು ಕೂಡ ಅವರ ಆರೋಗ್ಯ ವಿಚಾರಿಸಿದ್ದಾರೆ.

ಆಸ್ಕರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ತಂದೆ ಉಪಾಧ್ಯಕ್ಷರಾಗಿದ್ರು.ನಮ್ಮ ತಂದೆಯವರ ಸ್ವಭಾವ ಮತ್ತು ಆಸ್ಕರ್ ಅವರ ಸ್ವಭಾವ ಒಂದೇ ಆಗಿತ್ತು. ಹೀಗಾಗಿ ನನ್ನ ಮೇಲೂ ವಿಶೇಷ ಪ್ರೀತಿ ಇದ್ದ ಕಾರಣ ಈ ಸ್ಥಾನಕ್ಕೇರಲು ಸಹಾಯ ಮಾಡಿದ್ದರು.‌ಅವರ ಆರೋಗ್ಯದ ವಿಚಾರದಲ್ಲಿ ಪ್ರಾರ್ಥಿಸ್ತೇವೆ. ಅವರು ಜಂಟಲ್ ಮೆನ್. ಬಹಳ ಒಳ್ಳೆಯ ಮನುಷ್ಯ. ಟೆಲಿ ಮೆಡಿಸಿನ್ ಸಂಬಂಧವೂ ಎಲ್ಲಾ ವೈದ್ಯರ ಜೊತೆ ಮಾತುಕತೆ ‌ನಡೀತಿದೆ ಅಂದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply