ಬಳ್ಳಾರಿ- ಮಹಾದೇವ ಎಜುಕೇಶನ್, ಆರ್ಟ್ ಅಂಡ್ ಕಲ್ಚರಲ್ ಟ್ರಸ್ಟ್(ರಿ), ಬಳ್ಳಾರಿ, ಅಯೋಜಿಸಿದ್ದ ೨ ದಿನಗಳ ಸಂಕ್ರಾತಿ ವೈಭವ ನಿನ್ನೆ ಇಂದು ಸಮಾರೊಪಗೊಂಡಿದೆ. ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ೨೦೨೦ನೇ ಸಾಲಿನ ಜೀವಮಾನದ ಸಾಧನೆ “ನಮ್ಮ ಬಳ್ಳಾರಿ ರತ್ನ” ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪುರಸ್ಕೃತರು ಡಾ. ಯಶವಂತ ಭೂಪಾಲ್, ಅಧ್ಯಕ್ಷರು, ಬಿಐಟಿಎಂ & ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳು, ಬಳ್ಳಾರಿ, ಹೆಚ್. ಹಂಪನ ಗೌಡ, ಮಾಜಿ ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ, ಡಾ. ರತ್ನಸುಯಜ್ಞ, ಖ್ಯಾತ ವೈದ್ಯರು, ರಾಜ್ಯ ಪ್ರಶಸ್ತಿ ಪುರಸ್ಕೃತರು, ಬಳ್ಳಾರಿ, ಚಾ.ಮಾ. ಗಂಗಾಧರಯ್ಯ, ರಾಷ್ಟç ಪ್ರಶಸ್ತಿ ವಿಜೇತ ಶಿಕ್ಷಕರು, ಬಳ್ಳಾರಿ,ಆರ್.ಎಲ್. ಜಾದವ್, ಚಿತ್ರಕಲಾ ಶಿಕ್ಷಕರು, ಭವಾನಿ ಕಲಾ ಮಹಾವಿದ್ಯಾಲಯ,  ಬಳ್ಳಾರಿಯಲ್ಲಿ ಇಂತಹ ಅಪರೂಪದ ಕಾರ್ಯಕ್ರಮ ನಡೆಯುತ್ತಿರುವುದು ನಮಗೆ ಬಹಳ ಸಂತಸ ತಂದಿದೆ ಹಾಗೂ ಹಲವಾರು ಕಲಾವಿದರು ಬೆಳಕಿಗೆ ಬರುವ ಇಂತಹ ಸಂಘಟನೆಗೆ ನಮ್ಮ ಬೆಂಬಲ ನೀಡುತ್ತೇವೆ ಎಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ  ನಾರ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ‌ ಸಮಾರೋಪ ಭಾಷಣ ಸಿದ್ದಲಿಂಗೇಶ ರಂಗಣ್ಣನವರ್, ಉಪ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ ಇವರು ಮಾತನಾಡುತ್ತಾ “ಪುರಾತನ ಕಾಲದಿಂದಲೂ ಶಿಲ್ಪಕಲೆ ಚಿತ್ರಕಲಾವಿದರು ಮತ್ತು ಕವಿ ಸಾಹಿತಿಗಳು ರಚಿಸಿದ ವಿವಿಧ ರೀತಿಯ ಕಲೆಸಾಹಿತ್ಯದಿಂದಲೇ ಇತಿಹಾಸನ್ನು ನಾವು ತಿಳಿದಿರುವುದು. ಇಂದಿನ ಹಾಗೆ, ಅಂದು ಯಾವುದೇ ಡಿಜಿಟಲ್ ಮಾದ್ಯಮಗಳು ಇರಲಿಲ್ಲ, ಕಲಾವಿದರು ರಚಿಸಿದ ಕಲೆಗಳಿಂದ ಅಧ್ಯಯನ ಮಾಡಿಯೇ ನಾವೆಲ್ಲ ಅಂದಿನ ಜೀವನದ ಬಗ್ಗೆ ಮಾಹಿತಿಯನ್ನು ಪಡೆಯಲ್ಲ ಸಾಧ್ಯವಾಗಿದೆ. ಈ ಟ್ರಸ್ಟ್ವತಿಯಿಂದ ಆಚರಿಸಿದ ಸಂಕ್ರಾಂತಿ ವೈಭವ ನಿಜಕ್ಕೂ ಶ್ಲಾಘನೀಯ ಎಂದು ಆಯೋಜಕರಾದ ಬಿಸಿಲಹಳ್ಳಿ ಬಸವರಾಜ್‌ರವರಿಗೆ ಅಭಿನಂದನೆ” ತಿಳಿಸಿದ್ದಾರೆ..‌

About Author

Priya Bot

Leave A Reply