ರೋಗಿಗಳ ಮನೆ ಬಾಗಿಲಿಗೆ ಆಕ್ಸಿಜನ್

0

ಬಳ್ಳಾರಿ  – ಕರೋನಾ ಸೋಂಕಿಗೊಳಗಾದ ಗಣಿ ನಾಡು ಬಳ್ಳಾರಿ ನಗರದಲ್ಲಿ, ಯಾರಿಗಾದರೂ ಆಕ್ಸಿಜನ್ ಸಮಸ್ಯೆಯಾಗಿ ತೊಂದರೆಗಳಾದರೆ,  ಹಂತವರ ಮನೆ ಬಾಗಿಲಿಗೆ ಆಕ್ಸಿಜನ್ ತಲುಪಿಸುವ  ವ್ಯವಸ್ಥೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಾಡಿದೆ. ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ  ಆಕ್ಸಿಜನ್ ಬ್ಯಾಂಕನ್ನು  ರೆಡ್‍ಕ್ರಾಸ್ ಸಂಸ್ಥೆ ತೆರೆದಿದ್ದು, ಸಂಸ್ಥೆಯ ಉಪ ಸಭಾಪತಿಗಳಾದ ಡಾ.ಎಸ್.ಜೆ.ವಿ.ಮಹಿಪಾಲ್ ಅವರು ಉದ್ಘಾಟನೆ ಮಾಡಿದ್ದಾರೆ. ‌

ಬಳಿಕ ಮಾತನಾಡಿದ ಅವರು ಬಳ್ಳಾರಿ ನಗರದಲ್ಲಿ ಕೋವಿಡ್ ದೃಡಪಟ್ಟ ರೋಗಿಗಳಿಗೆ ಆಸ್ಪತ್ರೆಯಿಂದ ವಾಸಿಯಾದ ನಂತರ ಅವರಿಗೆ ಉಸಿರಾಟದ ತೊಂದರೆ ಇದ್ದರೆ, ಅವರು ವೈದ್ಯರ ಸಲಹೆ ಮೇರೆಗೆ ಆಕ್ಸಿಜನ್‍ನ ಅವಶ್ಯಕತೆ ಇದ್ದಲ್ಲಿ ನಮ್ಮ ರೆಡ್ ಕ್ರಾಸ್ ವತಿಯಿಂದ ಆಕ್ಸಿಜನ್ ಕಾನಸನ್‍ಟ್ರೇಟರ್‍ಗಳನ್ನು 10 ದಿನಗಳ ಕಾಲ ಉಚಿತವಾಗಿ ನೀಡಲಾಗುವುದು ಎಂದರು. 

ಈ ಆಕ್ಸಿಜನ್ ಕಾನಸನ್‍ಟ್ರೇಟರ್ ಪಡೆಯಲು ರೆಡ್‍ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರಾದ ವಿಷ್ಣು ಕುಮಾರ್ ಅವರ ದೂ.ಸಂ 9902713944 ಗೆ ಸಂಪರ್ಕಿಸಬಹುದು ಎಂದಿದ್ದಾರೆ. ಸದ್ಯಕ್ಕೆ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಪ್ರಮಾಣ ಇಳಿಕೆ ಕಂಡಿದ್ದು, ಒಂದು ವೇಳೆಯಲ್ಲಿ ಸಮಸ್ಯೆ ಹೆಚ್ಚಾದಾಗ ಇದರ ಸದುಪಯೋಗವನ್ನು ಜನರು ಪಡೆಯಲಿ ಎಂದು ಮನವಿ ಮಾಡಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply