ಪೇಸ್ ಬುಕ್ ಲೈವ್ ನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟ

0

ಕರೋನಾ ಸೋಂಕಿನ ಹಾವಳಿಯಿಂದಾಗಿ ಬಹುತೇಕರ ಬದುಕು ಬುಡಮೇಲಾಗಿದೆ. ಇನ್ನು ತಮ್ಮ ನೆಚ್ಚಿನ ನಟ ಇಂದು ಪೇಸ್ ಬುಕ್‌ಲೈವ್ ನಲ್ಲಿ ಇದ್ದಾರೆ ಎಂದು ಸಂತೋಷದಿಂದ ಅವರ ಪೇಸ್ ಬುಕ್ ಲೈವ್ ನೋಡುತ್ತಿದ್ದ ಅಭಿಮಾನಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಕಾರಣ ಪೇಸ್ ಬುಕ್ ಲೈವ್ ನಲ್ಲಿ ಇದ್ದ ಕಿರುತೆರೆಯ ನಟ ದಿಢೀರನೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅಷ್ಟಕ್ಕೂ ಈ ಒಂದು ಘಟನೆ ನಡೆದಿದ್ದು. ಬಂಗಾಳಿ ಕಿರುತೆರೆ ನಟ ಸುವೋ ಚಕ್ರವರ್ತಿ ಆತ್ಮಹತ್ಯೆಗೆ‌ ಮುಂದಾಗಿದ್ದಾರೆ.

ದೇಶದೆಲ್ಲೆಡೆ ಕರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ದೇಶದ ಬಹುತೇಕ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ.  ಎರಡನೇ ಅಲೆಯಲ್ಲಿ ಕರೋನಾ ಸೋಂಕಿನ  ಆರ್ಭಟ ಜೋರಾದ ಹಿನ್ನೆಲೆಯಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಬಹುತೇಕ ಕಿರುತೆರೆ ನಟರಿಗೆ ಸಂಕಷ್ಟ ಎದುರಾಗಿದೆ‌, ಕೆಲ ಕಲಾವಿದರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಅದೇ ರೀತಿ ಕೆಲಸ ಇಲ್ಲದೆ, ಕಿರುತೆರೆ ನಟನೋರ್ವ ಫೇಸ್​ಬುಕ್​ ಲೈವ್​ನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಸುವೋ ಚಕ್ರವರ್ತಿ ಇಂದು ತಮ್ಮ ಪೇಸ್ ಬುಕ್ ಪೇಜ್ ನಲ್ಲಿ ನೈವ್ ಮಾಡಿ ತಮ್ಮ ನೋವುಗಳನ್ನು ಹಂಚಿಕೊಂಡಿದ್ದಾರೆ. ಇದಾದ ಬಳಿಕ ಏಕಾಏಕಿ ಲೈವ್ ನಲ್ಲಿಯೇ ನಿದ್ದೆ ಮಾತ್ರೆ ಸೇವನೆ ಮಾಡಿದ್ದಾರೆ. ಇದನ್ನು ಗಮನಿಸಿದ ಅವರ ಅಭಿಮಾನಿಗಳು ಹತ್ತಿರದ ಪೊಲೀಸ್ ಠಾಣೆಗೆ‌ ಮಾಹಿತಿ ನೀಡಿದ್ದು, ತಕ್ಷಣ ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply