ಮುಂಬೈ – 2020 ನೇ ಸಾಲಿನ ದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡಕೋಣೆ ಮತ್ತು ನಟರಾದ ಅಕ್ಷಯ ಕುಮಾರ ಸೇರಿದಂತೆ ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಲಭಿಸಿದೆ. ಇನ್ನು ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ತಮ್ಮದೇ ಚಾಪನ್ನು ಮೂಡಿಸಿರುವ ಕಿಯಾರಾ ಅದ್ವಾನಿ, ಹಾಗೂ ಸುಶ್ಮಿತಾ ಸೇನ್ ಅವರು ದಾದಾಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಲಕ್ಷ್ಮಿ ಅಗರವಾಲ್ ಅವರ ಜೀವನ ಆಧಾರಿತ ಸಿನಿಮಾ ಚಪಾಕ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು. ಈ ಚಿತ್ರದಲ್ಲಿ ನಟಿಸಿದಕ್ಕಾಗಿ ಅವರಿಗೆ ಉತ್ತಮ ನಟಿ ಪ್ರಶಸ್ತಿ ದೊರೆತಿದೆ. ಉತ್ತಮ ನಟ ಅಕ್ಷಯ ಕುಮಾರ, ವಿಮರ್ಶಕರ ಉತ್ತಮ ನಟಿ- ಕಿಯಾರಾ ಅಡ್ವಾಣಿ, ವಿಮರ್ಶಕರ ಉತ್ತಮ ನಟ- ಸುಶಾಂತ್ ಸಿಂಗ್ ರಜಪೂತ್ ಉತ್ತಮ ಚಿತ್ರ- ತಾನಾಜಿ, ಉತ್ತಮ ವಿದೇಶಿ ಪೀಚರ್ ಚಿತ್ರ- ಪ್ಯಾರಾಸೈಟ್ ಉತ್ತಮ ನಿರ್ದೇಶಕ- ಅನುರಾಗ್ ಬಸು ಅವರಿಗೆ ಲಭಿಸಿದೆ.