ಬಳ್ಳಾರಿ- ಗಣಿಜಿಲ್ಲೆಯ ಹಡಗಲಿ ತಾಲೂಕಿನ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಇಂದು ನಡೆದಿದ್ದು, ಮುತ್ತಿನ ರಾಶಿ ಮೂರು ಪಾಲು ಆದಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ.

ಮೈಲಾರಲಿಂಗೇಶ್ವರನ ಸ್ವಾಮಿ ದೇಗುಲದ ಡಂಕಣ ಮರಡಿಯಲಿ ನಡೆದ ಕಾರ್ಣಿಕ ನುಡಿ ಇದಾಗಿದ್ದು, ಬಿಲ್ವ ಏರಿದ ಗೊರವಯ್ಯ ಸದ್ದಲ್ಲೇ ಎಂದು ಮೂರು ಬಾರಿ ಮುತ್ತಿನ ರಾಶಿ ಮೂರು ಪಾಲು ಆದಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ. ಪ್ರಸಕ್ತ ಸಾಲಿನ ರಾಜಕೀಯ, ಅರ್ಥಿಕ ಹಾಗೂ ಸಾಮಾಜಿಕವಾಗಿ ಏರುಪೇರು ಆಗುವ ಮುನ್ಸೂಚನೆಯನ್ನ ಈ ಕಾರ್ಣಿಕ ನುಡಿ ನುಡಿಯಲಿದೆ. ಉತ್ತರ ಕರ್ಣಾಟಕದ ಪ್ರಸಿದ್ದವಾದ ಕಾರ್ಣಿಕ ಇದಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಜನ ಕಾರ್ಣಿಕ ಕೇಳುಲು ಬರುತ್ತಾರೆ. ಪ್ರತಿ ವರ್ಷವಿಲ್ಲಿ ಕಾರ್ಣಿಕ ಹೇಳಲಾಗುತ್ತಿದ್ದು, ಒಂದು ವರ್ಷದ ಭವಿಷ್ಯದ ಕಾರ್ಣಿಕ ಇದಾಗಿದೆ ಎಂದು ಜನರ ನಂಬಿಕೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply