ಹೆಚ್ಚಿನ ಫೀಸ್ ಕಿರುಕುಳ ಆರೋಪ,ಶಾಲೆ ವಿರುದ್ಧ ಪೋಷಕರು ಪ್ರತಿಭಟನೆ

0

ವಿಜಯನಗರ

ಸರ್ಕಾರದ ಆದೇಶ ಮೀರಿ ಮಕ್ಕಳ ಪೋಷಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು ಶಾಲೆ ಮುಂದೆ ಪ್ರತಿಭಟನೆ ಮಾಡಿರು ಘಟನೆ, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.‌ ಹೊಸಪೇಟೆಯ  ಸ್ಟೇಶನ್‌ ರಸ್ತೆಯ ಚೈತನ್ಯ ಟೆಕ್ನೊ ಶಾಲೆ ಎದುರು ಪೋಷಕರು  ಪ್ರತಿಭಟನೆ ನಡೆಸಿದ್ದಾರೆ.

ಶಾಲೆಯ ಮುಖ್ಯಶಿಕ್ಷಕಿ ಹಾಗೂ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಚೈತನ್ಯ ಟೆಕ್ನೊ ಶಾಲೆಯವರು ಶಾಲೆ ಪ್ರವೇಶ ಶುಲ್ಕ ಹೆಚ್ಚಳ ಮಾಡಿದ್ದಾರೆ. ಯಾವ ಶಾಲೆಯವರು ಶುಲ್ಕ ಹೆಚ್ಚಿಸಬಾರದು ಎಂದು ಸರ್ಕಾರದ ನಿರ್ದೇಶನವಿದೆ. ಹೀಗಿದ್ದರೂ ಅದನ್ನು ಗಾಳಿಗೆ ತೂರಿ ಪೋಷಕರನ್ನು ಹಿಂಸಿಸುತ್ತಿದ್ದಾರೆ. ಈ ವರ್ಷ ನರ್ಸರಿ ಪ್ರವೇಶಕ್ಕೆ ₹6,000 ಶುಲ್ಕ ಹೆಚ್ಚಿಗೆ ಮಾಡಿದ್ದಾರೆ. ಇತರೆ ತರಗತಿಗೆ ಇದಕ್ಕಿಂತ ಹೆಚ್ಚಿದೆ’ ಎಂದು ಆರೋಪಿಸಿದ್ದಾರೆ.

ಬಳಿಕ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಯನ್ನು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ . ಬಳಿಕ ಸ್ಥಳಕ್ಕೆ ಆಗಮಿಸಿದ ಶಿಕ್ಷಣಾಧಿಕಾರಿ ಸುನಂದಾ ಅವರನ್ನು ಪೋಷಕರು ತರಾಟೆ ತೆಗೆದುಕೊಂಡಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಹತ್ತು ಹಲವಾರು ನೆಪ ಹೇಳಿ ಮಕ್ಕಳಿಗೆ ಫೀಸ್ ಕಟ್ಟುವಂತೆ ಕಿರುಕುಳ ನೀಡುತ್ತಾರೆ‌. ಕೂಡಲೇ ಶಾಲೆಯನ್ನು ಕ್ಲೋಜ್ ಮಾಡುವಂತೆ ಪಟ್ಟುಹಿಡಿದ್ರು‌. ಬಳಿಕ ಪೋಷಕರನ್ನು ಸಮಾಧಾನ ಮಾಡಿದ ಬಿಇಓ ಅವರು  ಶಾಲೆ ಆ ರೀತಿಯಲ್ಲಿ ಬಡೆದುಕೊಂಡಿದ್ದರೆ‌ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply