ಬಳ್ಳಾರಿ- ಸಾರಿಗೆ ನೌಕರರ ಮುಷ್ಕರದ ಹಿನ್ನಲೆ, ರಾಜ್ಯಾದ್ಯಂತ ಬಸ್‌ಗಳು ರಸ್ತೆಗಿಳಿಯದ ಹಾಗೆ ಬಂದ್‌ಗೆ ಕರೆ ನೀಡಲಾಗಿತ್ತು, ಈ ಹಿನ್ನಲೆ ಗಣಿ ನಾಡು ಬಳ್ಳಾರಿಯಲ್ಲಿ ಮುಷ್ಕರದ ಬಿಸಿ ತಟ್ಟಿದೆ. ಬೆಳಿಗ್ಗೆ ಇಂದಲೇ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ರಸ್ತೆಗಿಳಿಯದೆ ಬಂದ್‌ಗೆ ಬೆಂಬಲ ಸೂಚಿಸುವೆ, ಯಾವೊಂದು ಕೆ.ಎಸ್.ಆರ್.ಟಿ.ಸಿ ಬಸ್‌ಗಳು  ರಸ್ತೆಗಿಳಿಯದೆ ಪ್ರಯಾಣಿಕರು ಪರದಾಡುವ ಸ್ಥತಿ ನಿರ್ಮಾಣವಾಗಿದ್ದು, ಖಾಸಗಿ ವಾಹನ ಗಳ ಮೊರೆ ಹೋಗುವ ಸ್ಥಿತಿ ನಿರ್ಮಾಣ ವಾಯಿತು. ಸಾರಿಗೆ ನೌಕರರ ಮುಷ್ಕರದ ಹಿನ್ನಲೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಪ್ ಇಂದು ಸಂಪೂರ್ಣ ಖಾಸಗಿ ವಾಹನಗಳ ತಾಣವಾಗಿ ಪರಿಣಿಸಿದೆ, ಬಂದ ಎಲ್ಲ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗಿ ತಮ್ಮ ತಮ್ಮ ಊರುಗಳನ್ನ ಸೇರುವಂತಹ ದೃಶ್ಯಗಳು ಕಂಡುಬಂದವು.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply