ಬಳ್ಳಾರಿ- ಬಳ್ಳಾರಿಯ ಎಲ್ಲ ಆಟೋಗಳ ಚಾಲಕರು ಇನ್ಮುಂದೆ ಕಡ್ಡಾಯವಾಗಿ ಪರ್ಮೀಟ್ ಹೊಂದಿರಲೇಬೇಕು. ಇಲ್ಲಾ ಅಂದ್ರೆ ಕಾನೂನು ರೀತಿಯ ಕ್ರಮವನ್ನ ಎದುರಿಸಬೇಕಾಗುತ್ತೆ ಎಂದು ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ಎಂ.ನಾಗರಾಜ ಮಾಡಳ್ಳಿ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿಯ ಹೊಸ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರ ಹಾಗೂ ಮಾಲೀಕರನ್ನ ಒಳಗೊಂಡಂತಹ ಸಭೆಯನ್ನ ನಡೆಸಿದ ಸಿಪಿಐ ಎಂ. ನಾಗರಾಜ ಅವರು, ಬಳ್ಳಾರಿ ಮಹಾನಗರದಲ್ಲಿ ಸಂಚರಿಸುವ ಎಲ್ಲ ಆಟೋಗಳಿಗೂ ಪರ್ಮೀಟ್ ಇರಲೇಬೇಕು. ಅಂತಹ ಆಟೋಗಳಿಗೆ ಮಾತ್ರ ಬಳ್ಳಾರಿ ಮಹಾನಗರದಲ್ಲಿ ಸಂಚರಿಸಲು ಅವಕಾಶ ಇರುತ್ತೆ. ಪರ್ಮೀಟ್ ಇರದ ಆಟೋಗಳನ್ನ ಮುಲಾಜಿ ಇಲ್ಲದೇ ಜಪ್ತಿಗೊಳಿಸಿಕೊಂಡು ಸೂಕ್ತ ಕಾನೂನು ರೀತಿಯ ಕ್ರಮವನ್ನ ತೆಗೆದುಕೊಳ್ಳಲಾಗುವುದು. ಹಾಗೂ ಆಟೋ ಚಾಲಕರು ಚಾಲನಾ ಪರವಾನಗಿ, ನೋಂದಣಿ ಪತ್ರ, ವಾಹನ ವಿಮೆ (ಇನ್ಸುರೆನ್ಸ್), ಪಿಟ್ ನೆಸ್ ಸರ್ಟಿಫಿಕೇಟ್, ಪೊಲಿಷನ್ ಸರ್ಟಿಫಿಕೇಟ್ ದಾಖಲೆಗಳನ್ನ ಕಡ್ಡಾಯವಾಗಿ ಹೊಂದಿರಲೇಬೇಕೆಂದು ಖಡಕ್ ಆಗಿ ಸೂಚಿಸಿದ್ದಾರೆ ಸಿಪಿಐ ಎಂ.ನಾಗರಾಜ.