ಹುಬ್ಬಳ್ಳಿ – ರಾಜ್ಯದಲ್ಲಿ ಬ್ಲಾಕ್ ಫಂಗಸ್ ಸೊಂಕು ಹೆಚ್ಚಾಗಿ ಹರಡುತ್ತಿದೆ. ಇದರ ಕಾರಣ ತಿಳಿಯಲು ಸರ್ಕಾರದಿಂದ ಮೈಕೋಲಾಜಿಸ್ಟ್ (ಶಿಲೀಂದ್ರ ತಜ್ಞರ) ಸಮಿತಿ ನೇಮಿಸಲಾಗಿದೆ. ತಜ್ಞರ ಸಮಿತಿ ಪ್ರಾಥಮಿಕ ವರದಿಯನ್ನು ನೀಡಿದೆ. ಆಸ್ಪತ್ರೆಗಳಲ್ಲಿ ಬಳಸುವ ಹ್ಯುಮಿಡಿಫೈಡ್‌ಗಳಲ್ಲಿ ಡಿಸ್ಟಿಲ್ ವಾಟರ್‌ ಬಳಸಬೇಕು, ಆದರೆ ಹಲವು ಕಡೆ ನಳದ ನೀರನ್ನು ಹಾಕಿದ್ದಾರೆ. ಇದರಿಂದ ಫಂಗಸ್ ಬೆಳವಣಿಗೆಯಾಗಿದೆ. ಕ್ಯಾನುಲಾಗಳು ಸೇರಿದಂತೆ ಐ.ಸಿ.ಯುನಲ್ಲಿ ಬಳಸುವ ವೈದ್ಯಕೀಯ ಪರಿಕರಗಳಲ್ಲಿ ಕೂಡ ಫಂಗಸ್ ಬೆಳೆಯತ್ತಿದೆ. ಇವುಗಳನ್ನು ಮತ್ತೊಬ್ಬ ರೋಗಿ ಬಳಸುವಾಗ ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಿ ಬಳಸಬೇಕು. ಇಲ್ಲವಾದರೆ ಹೊಸದನ್ನು ಬಳಸಬೇಕು ಎಂಬ ಸಲಹೆಯನ್ನು ತಜ್ಞರ ಸಮಿತಿ ನೀಡಿದೆ. ತಜ್ಞರ ವರದಿ ಆಧರಿಸಿ ಬ್ಲಾಕ್ ಫಂಗಸ್ ಸೊಂಕು ಹರಡುವುದನ್ನು ತಡೆಯಲು ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಬ್ಲಾಕ್ ಹಾಗೂ ವೈಟ್ ಫಂಗಸ್‌ನಲ್ಲಿ ವರ್ಣದ ಅಂಶ ಹೊರತು ಪಡಸಿದರೆ ಬೇರೆ ವ್ಯತ್ಯಾಸಗಳು ಇಲ್ಲ. ಸ್ಟಿರಾಯ್ಡ್‌ನ ವಿವೇಚನ ರಹಿತ ಬಳಕೆ ದೇಹದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವಂತೆ ಮಾಡುತ್ತದೆ. ಐ.ಸಿ.ಯು.ನಲ್ಲಿ ಆಮ್ಲಜನಕದ ಮೇಲೆ ರೋಗಿಗಳು ಹೆಚ್ಚುಕಾಲ ಇರುವುದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಫಂಗಸ್ ಸೋಂಕು ಇವರನ್ನು ತೀವ್ರತರನಾಗಿ ಬಾದಿಸತ್ತಿದೆ. ದೇಶದಲ್ಲಿ 40 ರಿಂದ 50 ಬ್ಲಾಕ್ ಪಂಗಸ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆದರೆ ಇಂದು ಹಲವು ರಾಜ್ಯಗಳಲ್ಲಿ ಸೊಂಕು ಹೆಚ್ಚಾಗಿ ಹರಡುತ್ತಿದೆ. ಪ್ರಸ್ತುತ ಮಾಹಿತಿ ಪ್ರಕಾರ ರಾಜ್ಯದಲ್ಲಿ 250 ಬ್ಲಾಕ್ ಫಂಗಸ್ ಸೋಂಕಿತರು ಇದ್ದಾರೆ. ‌ಎಲ್ಲಾ ಸೊಂಕಿತರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ದೇಶದಲ್ಲಿ ಬ್ಲಾಕ್ ಪಂಗಸ್ ಚಿಕಿತ್ಸೆಗೆ ಅಗತ್ಯವಾದ ಔಷದಗಳ 14000 ವೈಲ್ಸ್ ಉತ್ಪಾದನೆಯಾಗುತ್ತಿದೆ. ರಾಜ್ಯಕ್ಕೆ ಅಗತ್ಯವಿರುವಷ್ಟು ವೈಲ್‌ಗಳನ್ನು ಒದಗಿಸುವುದಾಗಿ ಕೇಂದ್ರ ರಾಸಾಯನಿಕ ‌ಹಾಗೂ ರಸಗೊಬ್ಬರ ಖಾತೆ ಸಚಿವರಾದ ಸದಾನಂದಗೌಡ ಅವರು ಆಶ್ವಾಸನೆ ನೀಡಿದ್ದಾರೆ ಎಂದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply