ಬೆಂಗಳೂರು – ಪೊಗರು ಚಿತ್ರ ವಿವಾದ ತಾರಕ್ಕೆ ಏರಿದ್ದು ಈ ವಿವಾದಕ್ಕೆ ಸದ್ಯ ಸಂಸದೆ ಶೋಬಾ ಕರಂದ್ಲಾಜೆ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಶೋಭಾ ಕರಂದ್ಲಾಜೆ ಕೇವಲ ಹಿಂದು ಧರ್ಮದ ಕುರಿತೇ ಅವಹೇಳನಕಾರಿಯಾಗಿ ಮಾತನಾಡಲಾಗುತ್ತೆ. ಕೂಡಲೇ ಚಿತ್ರ ಪ್ರದರ್ಶನ ನಿಲ್ಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಯಾಕೇ ಕೇವಲ ಹಿಂದು ಧರ್ಮದ ಬಗ್ಗೆ ಅವಹೇಳನ ಕಾರಿಯಾಗಿ ಚಿತ್ರಿಸಲಾಗುತ್ಯೆ ಯಾಕೇ ಬೇರೆ ಧರ್ಮದ ವಿರುದ್ದ ಮಾತನಾಡಲು ಗಡ್ಸ್ ಇಲ್ಲಾವಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕಳೆದ ಎರಡು ದಿನಗಳಿಂದ ಚಿತ್ರ ವಿವಾದವತಾರಕಕ್ಕೆ ಏರಿದ್ದು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಅವರು ಪತ್ರಿಕಾಗೋಷ್ಠಿ ನಡೆಸಿ ಕೂಡಲೇ ಚಿತ್ರದಲ್ಲಿ ಇರುವ 14 ದೃಶ್ಯ ತುಣುಕುಗಳನ್ನು ತೆಗೆದು ಹಾಕಬೇಕು ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತೆ ಎಂದಿದ್ದಾರೆ. ಈಗಾಗಲೇ ನಮ್ಮ ಬೇಡಿಕೆ ಚಿತ್ರತಂಡ ಒಪ್ಪಿಗೆ ಸೂಚಿಸಿದೆ, ಏನು ಮಾಡುತ್ತಾರೆ ಎಂದು ಕಾದ ನೋಡಬೇಕು ಎಂದಿದ್ದಾರೆ.
ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow