ಬೆಂಗಳೂರು- ಕರಾಬು ಬಾಸು ಕರಾಬು ಎಂಬ ಹಾಡಿನ ಮೂಲಕ ಜನರಲ್ಲಿ ಮೋಡಿ ಮಾಡಿದ್ದ ಪೊಗರು ಚಿತ್ರ ಬಿಡುಗಡೆಯಾಗಲಿದೆ. ಇದೇ ಫೆಬ್ರವರಿ 19ಕ್ಕೆ ಚಂದನವನದ ಬಹುನಿರೀಕ್ಷಿತ ಸಿನಿಮಾ ಪೊಗರು ಚಿತ್ರ ತೆರೆಗೆ ಅಪ್ಪಳಿಸಲಿದೆ. ಚಿತ್ರ ಬಿಡುಗಡೆ ಸೇರಿದಂತೆ ನಟರು ಯಾವುದೇ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ವಾಡಿಕೆಯಾಗಿದೆ. ಹಾಗೆಯೇ ಇಂದು ಪೊಗರು ಚಿತ್ರದ ನಾಯಕ ಧ್ರುವ ಸರ್ಜಾ ಇಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದು, ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಮುಂದಿನ ತಿಂಗಳ ಅಂದ್ರೆ ಫೆಬ್ರವರಿ 19 ರಂದು ಚಿತ್ರ ಬಿಡುಗಡೆ ಆಗಲಿದೆ ದಯಮಾಡಿ ನಮ್ಮನ್ನು ಹರಸಿ ಎಂದು ಮನವಿ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಒಟ್ಟು ನಾಲ್ಕು ಫೈಟ್ ಸೀನ್ ಗಳಿದ್ದು ಸತತವಾಗಿ ಮೂರು ವರ್ಷಗಳ ಕಾಲ ಚಿತ್ರ ನಿರ್ಮಾಣ ಮಾಡಲಾಗಿದೆ. ಇದೊಂದು ಮಾಸ್ ಸಿನಿಮಾ ಅಲ್ಲ. ಚಿತ್ರದಲ್ಲಿ ಅಣ್ಣ-ತಂಗಿ, ಅಜ್ಜಿ-ಮೊಮ್ಮಗ ಸೆಂಟಿಮೆಂಟ್ ಎಮೋಷನ್ ಎಲ್ಲವೂ ಇದೆ. ಸಿನಿಮಾದಲ್ಲಿ ಒಟ್ಟು ನಾಲ್ಕು ಫೈಟ್ ಗಳಿದ್ದು, ಈಗಾಗಲೇ ಚಿತ್ರದ ಹಾಡುಗಳು ಯಶಸ್ವಿಯಾಗಿವೆ ಎಂದರು. ತುಂಬಾ ಶ್ರಮ ಮತ್ತು ಸಮಯ ತೆಗೆದುಕೊಂಡು ಸಿನಿಮಾ ಮಾಡಿದ್ದೇವೆ. ಕೊರೊನಾ ಆತಂಕದ ನಡುವೆಯೂ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕರು ಮತ್ತು ನಿರ್ದೇಶಕರು ನಿರ್ಧರಿಸಿದ್ದಾರೆ, ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ….