ಧಾರವಾಡ –  ವರದಕ್ಷಿಣೆಗಾಗಿ ೬ ತಿಂಗಳ ಗರ್ಭೀಣಿಗೆ ಆಕೆಯ ಪತಿ ವಿಷ ಕೊಟ್ಟು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.‌ ಧಾರವಾಡದ ಜಿಲ್ಲೆಯ ಹುಲಕೊಪ್ಪ ಗ್ರಾಮದ ಕಾವ್ಯಾ ತಡಸದಮಠ (೨೨)ಎಂಬ ಗರ್ಭಿಣಿಗೆನೇ ಆಕೆಯ ಪತಿ ಮುತ್ತಯ್ಯ ತಡಸದಮಠ ವಿಷ ಕೊಟ್ಟು ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲೆಯ ಕ್ಯಾರಕೊಪ್ಪ ಗ್ರಾಮದ ಕಾವ್ಯಾಳ ಜೊತೆಯಲ್ಲಿ ಮುತ್ತಯ್ಯನ ಮದುವೆಯಾಗಿತ್ತು. ಮದುವೆ ಆದಾಗಿನಿಂದಲೂ ವರದಕ್ಷಿಣೆ ತರುವಂತೆ ಒತ್ತಾಯ ಮಾಡುತ್ತಿದ್ದ ಎನ್ನಲಾಗಿದೆ. ಇದೇ ವಿಷಯವಾಗಿ, ಕಳೆದ ನಾಲ್ಕು ದಿನಗಳ ಹಿಂದೆ ಮುತ್ತಯ್ಯ ತನ್ನ ಪತ್ನಿಗೆ ತಂದೆಯ ಮನೆ ಇರುವ ಕ್ಯಾರಕೊಪ್ಪ ಗ್ರಾಮಕ್ಕೆ  ಬಿಟ್ಟು ಕೂಡಾ ಹೋಗಿದ್ದ. ಈ ಹಿನ್ನೆಲೆ ನ್ಯಾಯ ಬಗೆಹರಿಸಿಕೊಳ್ಳಲು ಕಾವ್ಯಾ ತಂದೆ ನಿನ್ನೆಯಷ್ಟೇ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಗೆ ದೂರನ್ನ ನೀಡಲು ಬಂದಿದ್ದರು. ಆದರೆ ಕಾವ್ಯಾ ಗಂಡನ ಜೊತೆಯಲ್ಲೇ ಜಗಳಕ್ಕೆ ಮುಂದಾಗದೇ ಅವನ ಜೊತೆಯಲ್ಲಿ ಹೋಗುವುದಾಗಿ ಹೇಳಿದ್ದರಿಂದ ಅವಳನ್ನ ಕಳಿಸಿಕೊಟ್ಟಿದ್ದರು.

ನಿನ್ನೆ ತಡ ರಾತ್ರಿ ಮುತ್ತಯ್ಯ ತನ್ನ ಪತ್ನಿ ಕಾವ್ಯಾ ಪೊಲೀಸ್ ಠಾಣೆಗೆ ಹೋಗಿದ್ದಕ್ಕೆ ಕುರುಕುಳ ನೀಡಿ, ಆಕೆಗೆ ವಿಷ ಕೊಟ್ಟು ಸಾಯಿಸಿದ್ದಾನೆ ಎಂದು ಮೃತ ಗರ್ಭಿಣಿ ಕುಟುಂಬದವರು ಆರೋಪಿಸಿದ್ದಾರೆ. ಸದ್ಯ ಕಾವ್ಯಾ ತಂದೆ ಮುತ್ತಯ್ಯನ ಮೇಲೆ ಕೊಲೆ ಪ್ರಕರಣ ದಾಖಲಿಸಲು ಕಲಘಟಗಿ ಪೊಲೀಸ್ ಠಾಣೆ ಮೇಟ್ಟಲೇರಿದ್ದಾರೆ.

About Author

Priya Bot

Leave A Reply