ರಸ್ತೆಯಲ್ಲಿಯೇ ಬಿದ್ದಾವ ನೋಡ್ರಿ ಪೊಲೀಸರ ಟೋಪಿ: ಬೆಲೆ ಇಲ್ಲದಂತಾಯಿತೇ…?

0

ಹುಬ್ಬಳ್ಳಿ: ಪೊಲೀಸರಿಗೆ ಎಷ್ಟು ಗೌರವ ಇದೆಯೋ ಅಷ್ಟೇ ಗೌರವ ಪೊಲೀಸರು ಹಾಕಿಕೊಳ್ಳುವ ಸಮವಸ್ತ್ರಗಳಿಗೆ ಇರುತ್ತದೆ. ಆದರೆ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾತ್ರ ಪೊಲೀಸರು ಹಾಕಿಕೊಳ್ಳುವ ಟೋಪಿಗೆ ಬೆಲೆಯೇ ಇಲ್ಲದಂತಾಗಿದೆ.

ಹೌದು.. ಹುಬ್ಬಳ್ಳಿ ಹೃದಯ ಭಾಗ ಚನ್ನಮ್ಮ ವೃತ್ತದ ಆಸುಪಾಸಿನಲ್ಲಿಯೇ ಪೊಲೀಸ್ ಹಾಗೂ ಸಂಚಾರಿ ಪೊಲೀಸರ ಟೋಪಿ ಎಲ್ಲೆಂದರಲ್ಲಿ ಎಸೆದಿರುವುದು ಕಂಡುಬಂದಿದೆ. ಪೊಲೀಸ್ ಇಲಾಖೆ ಅಂದ ಮೇಲೆ ಎಲ್ಲರಿಗೂ ಶಿಸ್ತನ್ನು ಕಲಿಸುವ ಇಲಾಖೆ ಆದರೇ ಈ ಇಲಾಖೆಯೇ ಅಶಿಸ್ತಿನಿಂದ ನಡೆದುಕೊಳ್ಳುತ್ತಿದೆ. ಟೋಪಿಗಳು ಮಾಸಿದ್ದರೇ ಅವುಗಳನ್ನು ವ್ಯವಸ್ಥಿತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು ಅದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ಎಸೆದರೇ ಹೇಗೆ ಎಂಬುವುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿಯೇ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ತನ್ನದೇ ಆದ ಗೌರವವನ್ನು ಉಳಿಸಿಕೊಂಡಿದೆ. ಅಲ್ಲದೇ ಹಲವಾರು ಕ್ರೈಂ ಗಳನ್ನು ಹೆಡೆಮುರಿ ಕಟ್ಟುವಲ್ಲಿ ಹೆಸರಾಗಿರುವ ಹು-ಧಾ ಕಮೀಷನರೇಟ್ ಸಿಬ್ಬಂದಿ ಸಮವಸ್ತ್ರಗಳಿಗೆ ಬೆಲೆ ಕೊಡದೇ ಬೇಕಾಬಿಟ್ಟಿಯಾಗಿ ಒಗದಿರುವುದು ಎಷ್ಟರ ಮಟ್ಟಿಗೆ ಸರಿ…?

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply