ಮಂಗಳೂರು  – ಕೋವಿಡ್‌ನಿಂದ ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡ ನೋವಿನ ಮಧ್ಯೆಯೂ ಮಂಗಳೂರು ಸಂಚಾರಿ ಪೂರ್ವ ಎಎಸ್‌ಐ ಡೊಂಬಯ್ಯ ದೇವಾಡಿಗ ಎಂಬುವಬರು ಲಾಕ್‌ ಡೌನ್ ವೇಳೆ ಸಂಚಾರ ನಿಯಂತ್ರಿಸುತ್ತಾ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಡೊಂಬಯ್ಯ ಅವರ ಅಣ್ಣನ ಮಗ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದು, ಒಂದು ತಿಂಗಳ ಹಿಂದೆ ಕೋಮಿಡ್ ಸೋಂಕಿಗೆ ಒಳಗಾಗಿದ್ದರು. ಪ್ರಾರಂಭಿಕ ಹಂತದಲ್ಲಿ ನಿರ್ಲಕ್ಷ, ಮಾಡಿದ ಪರಿಣಾಮ ಸೊಂಕು ಬಿಗಡಾಯಿಸಿದಾಗ  ಪುತ್ತೂರುವಿನಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ರೋಗ ಉಲ್ಬಣಗೊಂಡ ಬಳಿಕ ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದಾಖಲಾದ ಎರಡೇ ದಿನದಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

ಅವರಿಗೆ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಕುಟುಂಬ ಸದಸ್ಯನನ್ನು ಕಳೆದುಕೊಂಡ ದುಃಖ ಇನ್ನೂ ಡೊಂಬಯ್ಯ ಅವರಲ್ಲಿ ಮಡುಗಟ್ಟಿದೆ. ನಿವೃತ್ತಿಗೆ ಇನ್ನು ಕೇವಲ ಆರು ತಿಂಗಳು ಬಾಕಿ ಇದ್ದರೂ ತಮ್ಮ ಆರೋಗ್ಯದ ಬಗ್ಗೆ ಚಿಂತೆ ಮಾಡದೆ ಮಂಗಳೂರು ನಗರದಲ್ಲಿ ನಾಕಾಬಂದಿ ಹಾಕಿ ಸಂಚಾರ ನಿಯಂತ್ರಿಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಎಎಸ್‌ಐ ಡೊಂಬಯ್ಯ ದೇವಾಡಿಗ, ಕೋವಿಡ್ ನಾವು ಯೋಚನೆ ಮಾಡಿದ ಹಾಗೆ ಇಲ್ಲ ಎನ್ನುವುದನ್ನು ನಾವು ಪ್ರತ್ಯಕ್ಷ ಕಾಣುತ್ತಿದ್ದೇವೆ. ಅದೆಷ್ಟೋ ಕುಟುಂಬಗಳು ಇದಕ್ಕೆ ಬಲಿಪಶು ಆಗಿವೆ. ಇನ್ನಾದರೂ ಯುವಜನತೆ ಗಂಭೀರವಾಗಿ ಪರಿಗಣಿಸಿ ವಿನಾಕಾರಣ ಸುತ್ತಾಟ ನಿಲ್ಲಿಸಬೇಕು. ಅದಕ್ಕಾಗಿ ಅವರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸುತ್ತಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply