ಧಾರವಾಡ- ಬಿಜೆಪಿಯ  ಹೈಕಾಂಡ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೆ   ಸಚಿವ ಸ್ಥಾನದ ಆಕಾಂಕ್ಷೆಯನ್ನು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೊರಹಾಕಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು ಸಚಿವ ಸ್ಥಾನ ನನಗೆ  ಕೊಟ್ಟರೇ ಒಳ್ಳೆದು. ಏನ ಜವಾಬ್ದಾರಿ ಸಿಗಲಿದೆ ಅದನ್ನು ಒಳ್ಳೇ ರೀತಿಯಿಂದ ಮಾಡುವೆ ಈಗಂತೂ ಜಿಲ್ಲಾಧ್ಯಕ್ಷ ಸ್ಥಾನ ಇದೆ ಏನ ಇದೆಯೋ ನೋಡೋಣ? ಆದ್ರೆ  ಏಳು ಜನರಿಗೆ ಸಚಿವ ಸ್ಥಾನ ಅಂತಾ ಮಾಧ್ಯಮಗಳಿಂದಲೇ ಗೊತ್ತಾಗಿದೆ. ನಮ್ಮ ನಾಯಕರು ಯಾರನ್ನು ತಗೋಬೇಕು ಅಂತಾ ನಿರ್ಧಾರ ಮಾಡುತ್ತಾರೆ. ಎಲ್ಲ ಎಂಎಲ್ಎಗಳು ಆಕಾಂಕ್ಷಿಗಳು ಇದ್ದೆ ಇರ್ತಾರೆ. ಎಲ್ಲರಿಗೂ

ಎಲ್ಲರಿಗೂ ಸಚಿವರಾಗುವ ಅಪೇಕ್ಷೆ ಇದ್ದೆ ಇರುತ್ತದೆ. ಯಾರನ್ನು ತಗೋಬೇಕು, ಬಿಡಬೇಕು ಅಂತಾ ನಾಯಕರೇ ನಿರ್ಧಾರ ಮಾಡ್ತಾರೆ, ನನಗಿನ್ನೂ ವಯಸ್ಸಿದೆ, ಪಾಲಿಟಿಕ್ಸ್ ಇಸ್ ಎ ಲಾಂಗ್ ರೇಸ್. ಎಂದಿದ್ದಾರೆ ಇಏ ವೇಳೆಯಲ್ಲಿ ಮೂಲ ಬಿಜೆಪಿಗರಿಗೆ ಮನ್ನಣೆ ವಿಚಾರವಾಗಿ ಪ್ರತಿಕ್ರೀಯೆ ನೀಡಿದ ಅವರು ಪಕ್ಷಕ್ಕಾಗಿ ಮೊದಲಿನಿಂದ ದುಡಿದವರಿಗೆ ಕೊಡಬೇಕು ಅಂತಾ ಇರುತ್ತೆ ಆದರೆ ಈಗಿನ  ರಾಜಕಾರಣ ಅಂದ್ರೆ ಬ್ಯಾಲೆನ್ಸ್ ಮಾಡಲೇಬೇಕಾಗುತ್ತದೆ ಆ ಬ್ಯಾಲೆನ್ಸ್ ಮಾಡುವ ವಿಚಾರ ಸಿಎಂ ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ..

Leave A Reply