ಹೈದ್ರಾಬಾದ್ – 2021 ವರ್ಷಾ ಆರಂಭದ ಮುನ್ನವೇ ರೂಪಾಂತರಿ ಕರೋನಾ ವೈರಸ್ ಹಾವಳಿ ಹೆಚ್ಚಾಗಿದೆ. ಈಗಾಗಲೇ ರಾಜ್ಯಕ್ಕೆ ಕಾಲಿಟ್ಟಿರುವ ರೂಪಾಂತರಿ ವೈರಸ್ ಕಟ್ಟಿ ಹಾಕುವುದು ಹೇಗೆ ಎನ್ನು ಚಿಂತೆಯಲ್ಲಿ ಕೇಂದ್ರ ಸೇರಿದಂತ ರಾಜ್ಯ ಸರ್ಕಾರ ತಲೆ ಕಡಿಸಿಕೊಂಡಿದೆ. ಈ ಮಧ್ಯೆ  ಬ್ರಿಟನ್ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೊನಾ ವೈರಸ್ ಅನ್ನು ಕೋವ್ಯಾಕ್ಸಿನ್ ಲಸಿಕೆಯಿಂದ ಗುಣಪಡಿಸಬಹುದು ಎಂದ ಸಿಹಿ ಸುದ್ದಿ ಹೊರ ಬಿದ್ದಿದೆ. ಹೌದು ಕೋವ್ಯಾಕ್ಸಿನ್ ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆ ಭಾರತ್ ಬಯೋಟೆಕ್ ಹೇಳಿದೆ.  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಈ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು. ಸದ್ಯ ದೇಶದಲ್ಲಿ  3ನೇ ಹಂತದ ಲಸಿಕೆ ಪ್ರಯೋಗ ಮಾಡಲಾಗಿದೆ. ಈ ವೇಳೆ 20ಸಾವಿರ ಸ್ವಯಂ ಸೇವಕರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಬಳಸಲು ತುರ್ತು ಪರವಾನಗಿ ಅನುಮೋದನೆ ಕೋರಿ ಸಂಸ್ಥೆ ಔಷಧ ನಿಯಂತ್ರಕ ಅಧಿಕಾರಿಗಳನ್ನು ಸಂಪರ್ಕಿಸಿದೆ.

ಕೊರೊನಾ ವೈರಸ್ ಸಾಕಷ್ಟು ರೂಪಾಂತರ ಹೊಂದುವ ನಿರೀಕ್ಷೆಯಿದ್ದು, ನಾವು ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ಅದರ ವಿರುದ್ಧವೂ ಹೋರಾಡಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದೆ. ಅಲ್ಲದೇ  ಈ ಬಗ್ಗೆ ನಮಗೆ ಖಾತ್ರಿಯಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಯುಕೆಯಿಂದ ಭಾರತಕ್ಕೆ ಮರಳಿದ ಆರು ಜನರಿಗೆ ರೂಪಾಂತರಿತ ವೈರಸ್ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

Leave A Reply