ಬೆಂಗಳೂರು – ಈ ಹಿಂದೆ ಸದನದಲ್ಲಿ ನಗ್ನ ಚಿತ್ರ ನೋಡುವ ಮೂಲಕ ಭಾರಿ ಚರ್ಚೆಗೆ ಗ್ರಾಸವಾಗಿತ್ತು . ಆದ್ರೆ ಈಗ ಅದೇ ರೀತಿಯಲ್ಲಿ ಆರೋಪ ಪ್ರತಿಪಕ್ಷ ಸದಸ್ಯ ಪ್ರಕಾಶ್ ರಾಥೋಡ್ ಅವರು ಮೇಲೆ ಕೇಳಿಬಂದಿದೆ.  ಮೊಬೈಲ್​ನಲ್ಲಿ ಫೋಟೋ ನೋಡುತ್ತ ಡಿಲೀಟ್ ಮಾಡುವುದರಲ್ಲಿ ತಲ್ಲೀನರಾಗಿದ್ದ ಘಟನೆ ಇಂದು  ಸಂಭವಿಸಿದೆ.

ಕಲಾಪದ ವೇಳೆ ಮೊಬೈಲ್​ನಲ್ಲಿ ಫೋಟೋ ವೀಕ್ಷಿಸಿದ್ದು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಮಾತನಾಡಿದ ಪ್ರಕಾಶ್ ರಾಠೋಡ್, ನಾನು ನೂರಾರು ಸೊಸಿಯಲ್ ಗ್ರೂಪ್​ಗಳಲ್ಲಿ ಇದ್ದೇನೆ. ಸಾವಿರಾರು ವಿಡಿಯೋ ಇವೆ. ಮೊಬೈಲ್ ಸ್ಟೋರೇಜ್ ಫುಲ್ ಆಗಿತ್ತು.  ಹೀಗಾಗಿ ಅದನ್ನ ಡಿಲೀಟ್ ಮಾಡ್ತಿದ್ದೆ. ಅದು ಅಶ್ಲೀಲ ವಿಡಿಯೋನಾ? ಅನ್ನೋದೂ ನನಗೆ ಗೊತ್ತಿಲ್ಲ.. ನಾನು ಯಾವುದನ್ನೂ ನೋಡದೆ ಬಂದಿರುವ ಮೆಸೇಜ್ ಮತ್ತು ವಿಡಿಯೋ ಡಿಲೀಟ್ ಮಾಡ್ತಿದ್ದೆ ಎಂದರು. ನಾನು ಅಶ್ಲೀಲ ವಿಡಿಯೋ ನೋಡಿಲ್ಲ, ನೋಡೋದು ಇಲ್ಲ. ನನಗೆ ಯಾರೂ ಅಶ್ಲೀಲ ವಿಡಿಯೋ ಕಳಿಸಿರಲಿಲ್ಲ ಎಂದು ಪ್ರಕಾಶ್ ರಾಥೋಡ್ ಸ್ಪಷ್ಟನೆ ನೀಡಿದರು

About Author

Priya Bot

Leave A Reply