ಬೆಂಗಳೂರು-  ಹಿಂದುಗಳು ಆರಾಧ್ಯ ದೈವ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಧಾಮ ಸಂಗ್ರಹ ಕಾರ್ಯ ಈಗಾಗಲೇ ಎಲ್ಲಡೇ ಆರಂಭವಾಗಿದೆ. ರಾಜ್ಯದ ನಾನಾ ಮೂಲೆಗಳಿಂದ  ಕರ ಸೇವಕರು ಪ್ರತಿ ಮನೆ ಮನೆ ಇಂದ ಧನ ಸಂಗ್ರಹಕ್ಕೆ ‌ಮುಂದಾಗಿದ್ದಾರೆ.ಈಗಾಗಲೇ ಅಯೋಧ್ಯೆಯಲ್ಲಿ  ಭವ್ಯ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯಆರಂಭಗೊಂಡಿದೆ. ದೇಶದ ಪ್ರತಿ ಮನೆ ಮನೆಯಿಂದ  ಕೈಲಾದಷ್ಟು ದೇಣಿಗೆ ನೀಡಿ ದೇವಸ್ಥಾನ ನಿರ್ಮಾಣಕ್ಕ ಕೈಜೋಡಿಸುತ್ತಿದ್ದಾರೆ.

ಬಹು ಭಾಷಾ ನಟಿ ಪ್ರಣೀತಾ ಸುಭಾಷ್​ ಕೂಡ 1 ಲಕ್ಷ ರೂ. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಅಲ್ಲದೇ ತಮ್ಮ ಖಾತೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದಷ್ಟು ದೇಣಿಗೆ ನೀಡಲು ಮನವಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ  ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನೀವೂ ಕೂಡ ಧನಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

About Author

Priya Bot

Leave A Reply