ಹಾವೇರಿ- ಕಳೆದ 9 ತಿಂಗಳ ಬಳಿಕ ಶಾಲೆಗಳು ಇಂದಿನಿಂದ ಆರಂಭವಾಗಿವೆ ಮೊದಲ ದಿನ ಹಾವೇರಿ ಜಿಲ್ಲೆಯಲ್ಲಿ ಶೇ.45 ರಷ್ಟು 6 ರಿಂದ 10ನೇ ವಿದ್ಯಾರ್ಥಿಗಳು  ತರಗತಿಗೆ ಹಾಜರು . ನೂತನ ವರ್ಷಾರಂಭದ ದಿನ ಶಾಲೆಗಳಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ ರೋಶನ್ ಅವರು ಶಾಲೆಯಲ್ಲಿ ಮಕ್ಕಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.

ಜನವರಿ 1ರ ಶುಕ್ರವಾರ ಸರ್ಕಾರದ ಮಾರ್ಗಸೂಚಿ ಹಾಗೂ ಕೋವಿಡ್-19 ಮುನ್ನೆಚ್ಚರಿಕೆ ವಹಿಸಿ ಜಿಲ್ಲೆಯಾದ್ಯಂತ ಶಾಲೆಗಳು ಇಂದು ಆರಂಭಗೊಂಡವು. ಶಾಲಾ ಕೊಠಡಿಯೊಳಗೆ ಮಕ್ಕಳಿಗೆ ವಿದ್ಯಾಗಮ ಪಠ್ಯ ಬೋಧನೆ, ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಲಾಯಿತು.

ಕರೋನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ಮಾಹೆಯ ಮಧ್ಯಂತರದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ಸುಧೀರ್ಘ 10 ತಿಂಗಳ ನಂತರ ಶಾಲೆಗೆ ಮರಳಿಬಂದ ಸಂಭ್ರಮದಲ್ಲಿದ್ದರು. ಶಾಲೆಯಿಂದ ಹೊರಗೆ ವಿದ್ಯಾಗಮ ಮೊದಲ ಹಂತದ ಬೋಧನೆ, ಆನ್‍ಲೈನ್ ಪಾಠಗಳು, ಯೂಟ್ಯೂಬ್ ಕಲಿಕೆಗಳು ನಡೆಯುತ್ತಿದ್ದವು. ಸರ್ಕಾರ ಶಾಲಾ ಆರಂಭಕ್ಕೆ ಪರಿಷ್ಕ್ರತ ನಿಯಮಾವಳಿಗಳನ್ನು ರೂಪಿಸಿ ಸುಧೀರ್ಘ ಅವಧಿಯ ನಂತರ ಶಾಲೆಯ ಕೊಠಡಿಯೊಳಗೇ ವಿದ್ಯಾಗಮ ತರಗತಿಗಳ ನಡೆಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜನವರಿ 1 ರಿಂದ ಜಿಲ್ಲೆಯಾದ್ಯಂತ ಮಕ್ಕಳು ಶಾಲೆಗಳಿಗೆ ಮೊದಲ ದಿನವೇ ಉತ್ಸಾಹದಿಂದ ಪಾಲ್ಗೊಂಡಿದ್ದು ಕಂಡುಬಂದಿದೆ.  ಜಿಲ್ಲೆಯಲ್ಲಿ ಶೇ.45ರಷ್ಟು ಪ್ರಮಾಣದಲ್ಲಿ ಮೊದಲ ದಿನ ಮಕ್ಕಳು ಹಾಜರಾತಿ ಇರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಶ್ರೀಧರ ಅವರು ಮಾಹಿತಿ ನೀಡಿದರು.

About Author

Priya Bot

Leave A Reply