ಮಾನವಿಯತೇ ಮೆರೆದ ಪುರೋಹಿತರು

0

ವಿಜಯಪುರ – ವಿಜಯಪುರ ನಗರದಲ್ಲಿ ಕೋವಿಡ್ ಹಾಗೂ ನಾನ್ ಕೋವಿಡ್ ನಿಂದ ಮೃತ ಪಟ್ಟ ಸುಮಾರು 50 ಜನರ ಚಿತಾ ಭಸ್ಮ ವಾರಸುದಾರರು ಬಾರದ ಕಾರಣ ಸ್ಮಶಾನದಲ್ಲಿ ಹಾಗೇ ಉಳಿದುಕೊಂಡಿದ್ದವು,  ಇಂದು  50 ಕ್ಕೂ ಹೆಚ್ಚು ಜನರ ಅಸ್ಥಿಗಳಿಗೆ, ವಿಪ್ರ ಕ್ರಿಯಾಕರ್ಮ ಟ್ರಸ್ಟ್ ಆಶ್ರಯದಲ್ಲಿ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಯಲಗೂರು ಬಳಿ  ಸಕಲ ಪೂಜಾ ಕ್ರಿಯಾ ವಿಧಾನ, ಮಂತ್ರೋಪದೇಶ ಮಾಡಿ ಹಿಂದೂ ಸಂಪ್ರದಾಯದಂತೆ ಕೃಷ್ಣಾನದಿಯಲ್ಲಿ  ಚಿತಾ ಭಸ್ಮ ವಿಸರ್ಜನೆ ಮಾಡಲಾಯಿತು .ಸುಮಾರು ಒಂದುವರೆ ತಿಂಗಳಿಂದ ಸ್ಮಶಾನದಲ್ಲೇ ಇದ್ದ ಮೃತರ ಚಿತಾ ಭಸ್ಮವನ್ನು  ಅಂತಿಮ ವಿಧಿ ವಿಧಾನ ನೆರವೇರಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರೆತಂತಾಗಿದೆ ಅನ್ನೋದು ಪುರೋಹಿತರ ಅಭಿಪ್ರಾಯ.. 

ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಿದ ಕುಟುಂಬಸ್ಥರು, ಮರಳಿ ಬಾರದ ಹಿನ್ನೆಲೆ, ಮೃತಪಟ್ಟವರ ಅಸ್ಥಿಗಳು ಇಲ್ಲಿನ ದೇವಗಿರಿ ಸ್ಮಶಾನದಲ್ಲಿ ಉಳಿದುಕೊಂಡಿದ್ದವು.ವಿಪ್ರಕ್ರಿಯಾ ಕರ್ಮ ಟ್ರಸ್ಟ್ ನ ಪುರೋಹಿತ ಪ್ರಸನ್ನ ಆಚಾರ್ಯ ಕಟ್ಟಿ, ಸುರೇಶ ಆಚಾರ್ಯ ಅಂಕಲಗಿ ಅವರು ಧಾರ್ಮಿಕ ವಿಧಿವಿಧಾನ ಪ್ರಕ್ರಿಯೆ ನಡೆಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply