ದೆಹಲಿ -ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಹೆಸರಿನಲ್ಲಿ ಟೂಲ್‌ಕಿಟ್‌ ರಚಿಸಲಾಗಿದೆ ಎಂಬ ಆರೋಪದಲ್ಲಿ ಬಂಧನಕ್ಕೆ ಒಳಗಾದ ದಿಶಾ ರವಿ ಅವರನ್ನು ಮತ್ತೆ ಒಂದು ದಿನದ ಮಟ್ಟಿಗೆ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ.

ಫೆಬ್ರುವರಿ 13ರಂದು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ  ದಿಶಾ ಅವರನ್ನು ಬಂಧಿಸಿದ್ದರು. ಇಂದು  ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮುಂದೆ ದಿಶಾ ಅವರನ್ನು ಹಾಜರುಪಡಿಸಲಾಯಿತು. ನ್ಯಾಯಾಲಯ ಕೇವಲ ಒಂದು ದಿನದ ಮಟ್ಟಿಗೆ ಪೊಲೀಸ್‌ ವಶಕ್ಕೆ ನೀಡಲು ಒಪ್ಪಿಗೆ ಸೂಚಿಸಲಾಯಿತು. ಮಂಗಳವಾರ ಮತ್ತೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿದೆ.

ಇತ್ತ ಗಣಿ ನಾಡು ಬಳ್ಳಾರಿಯಲ್ಲಿ ಕೆಲ ಸಂಘಟನೆಯಗಳು ಪ್ರತಿಭಟನೆ ನೆಡೆಸಿವೆ. ಬಳ್ಳಾರಿಯ ರಾಯಲ್ ಸರ್ಕಲ್ ನಿಂದ ಪ್ರತಿಭಟನೆ ಆರಂಭಿಸಿ ನಗರದ ಪ್ರಮಖ ರಸ್ತೆಗಳಲ್ಲಿ ನೂರಾ ಕಾರ್ಯಕರ್ತರು ದಿಶಾ ರವಿ ಅವರನ್ನು ಕೂಡಲೇ ಬಿಡಿಗಡೆ ಮಾಡುವಂತೆ ಆಗ್ರಹ ಮಾಡಿದ್ರು‌. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಪ್ರತಿಭಟಣಾ ಮೆರವಣಿಗೆಯಲ್ಲಿ ಜೀನ್ಸ್ ತಯಾರಿಕ ಸಂಘದ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳು ಸಾಥ್ ನೀಡಿದ್ದವು…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply