ಚಿತ್ರದುರ್ಗ – ಕಾಂಗ್ರೆಸ್ ಪಕ್ಷ ಅಂದರೆ ಭ್ರಷ್ಟಾಚಾರ ಎಂದಿದ್ದ ಕಟೀಲ್ ಗೆ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.  ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಬಿಜೆಪಿ ಸರ್ಕಾರ ಕೊರೊನಾ ವಿಚಾರದಲ್ಲೂ ಹಣ ಲೂಟಿ ಮಾಡಿದ್ದಾರೆ ಎಂದು ಕೆಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಮಾತಿಗೆ ತಿರುಗೇಟು ನೀಡಿದ್ದಾರೆ. ಇನ್ನು ಇದೇ ವೇಳೆಯಲ್ಲಿ ಕೆಂದ್ರ ಸರ್ಕಾರ ಮಂಡನೆ ಮಾಡಿರುವ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರದಿಂದ ವರ್ಸ್ಟ್ ಬಜೆಟ್, ಜನರಿಗೆ ಉತ್ಸಾಹ ಇಲ್ಲ, ರೈತ, ಕಾರ್ಮಿಕ, ಸರ್ಕಾರಿ ನೌಕರರು ಸೇರಿ ಎಲ್ಲ ವರ್ಗಕ್ಕೆ ತೊಂದರೆ, ಡೀಸೆಲ್ , ಪೆಟ್ರೋಲ್ ಬೆಲೆ ಭಾರೀ ಏರಿಕೆ, ಬಿಜೆಪಿ ಆಡಳಿತದ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ, ಏಕೆ ಸುಮ್ಮನೆ ಕುಳಿತಿದ್ದೀರೆಂದು ಜನ ನಮಗೆ ಕರೆ ಮಾಡಿ ಕೇಳ್ತಿದ್ದಾರೆ ಹೀಗಾಗಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದು , ನಾಳೆ ಹೋರಾಟದ ರೂಪರೇಷೆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದಿದ್ದಾರೆ…

About Author

Priya Bot

Leave A Reply