ಕಾಂಗ್ರೆಸ್  ಕಾರ್ಯಕರ್ತರಿಂದ ಪ್ರತಿಭಟನೆ

0

ವಿಜಯಪುರ:  ತೈಲ ದರ ಏರಿಕೆ ಖಂಡಿಸಿ  ಇಂಡಿಯಲ್ಲಿ ಕಾಂಗ್ರೆಸ್  ಕಾರ್ಯಕರ್ತರಿಂದ ಪೆಟ್ರೋಲ್ ಬಂಕ್ ಎದುರು  ಪ್ರತಿಭಟನೆ ಮಾಡಲಾಯಿತು. ಪೆಟ್ರೋಲ್ ಡಿಸೆಲ್  ದರ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಇಂಡಿ ಮತ ಕ್ಷೇತ್ರದ  ಶಾಸಕ ಯಶವಂತರಾಯಗೌಡ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು  ನಗರದ ಶಾ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಿದರು.

ಕೊರೋನಾ ಸಂದಿಗ್ದ ಪರಿಸ್ಥಿತಿಯಲ್ಲಿ  ಬೆಲೆ ನಿಯಂತ್ರಿಸಿ ಜನರಿಗೆ ಸಹಾಯ ಮಾಡಬೇಕಾದ ಸರ್ಕಾರ ಪೆಟ್ರೋಲ್ ಬೆಲೆ ಸೆಂಚೂರಿ ಗಡಿದಾಟಿಸಿದೆ. ಇದು ಗಾಯದ ಮೇಲೆ ಬರೆ ಎಳೆದಿದೆ. ಈಗಾಲೇ ಲಾಕ್‍ಡೌನ್‍ನಿಂದಾಗಿ ಸಾಕಷ್ಟು ಜನ ಉದ್ಯೋಗವಿಲ್ಲದೆ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು  ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಸರಕಾರ ತನ್ನ ಜವಾಬ್ದಾರಿ  ಮರಿತಿದೆ, ದೇಶದ ೧೩೫ ಕೋಟಿ ಜನರ ಬಗ್ಗೆ ಕಾಳಜಿವಹಿಸಬೇಕು. ಸರಕಾರ ಎಲ್ಲಾ ಕ್ಷೇತ್ರದಲ್ಲೂ ವಿಫಲವಾಗಿದೆ. ಸರಕಾರಕ್ಕೆ  ಜನರ ಶಾಪ  ತಟ್ಟುತ್ತೆ, ಮತದಾರರು ಮುಂಬರುವ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಟ್ಟ ಕಲಿಸುತ್ತಾರೆ ಎಂದು ಪ್ರತಿಭಟನೆಯ ಸಂದರ್ಬದಲ್ಲಿ ಹೇಳಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply