ಬಳ್ಳಾರಿ- ಸಮೀಪದ ಕುಡುತಿನಿ ಪಟ್ಟಣದ ಸುತ್ತಮುತ್ತಲಿರುವ ಕಾರ್ಖಾನೆಗಳನ್ನು ಬಂದ್ ಮಾಡುವಂತೆ ಪಟ್ಟಣದ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು  ಕೈಗೊಂಡಿರುವ ಪ್ರತಿಭಟನೆ ಸತತವಾಗಿ 5ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಮಳೆ ಬಂದರೂ ಪ್ರತಿಭಟನೆ ಕರಾರು ಹಿಂಜರಿಯದೆ ಮಳೆಯಲ್ಲಿ ಕೊಳೆವು ಹಿಡಿದು ಪ್ರತಿಭಟನೆ ಮಾಡಿದರು.

ಇದೇ ವೇಳೆ ಮುಖಂಡರು ಮಾತನಾಡಿ,  ಸುತ್ತ ಮುತ್ತ ಇರುವ ಕಾರ್ಖಾನೆಗಳಿಂದ ಬರುವ ಧೂಳು ಮತ್ತು ಹೊಗೆಯ ವರದಿ ಪಡೆಯಲು ಈಗಲೇ ವಾಯು ಮಾಲಿನ್ಯ ಅಧಿಕಾರಿಗಳು ಸಂಬಂದಿಸಿದ ಅಧಿಕಾರಿಗಳಿಗೆ  ಕಳಿಸಿದ್ದಾರೆ. ತಕ್ಷಣವೇ ವರದಿ ಬರಲಿದೆ ಮತ್ತು ಕೆಲ ಕಾರ್ಖಾನೆಗಳು ಬಂದಾಗಲಿವೆ.  ಇನ್ನೂ ಪಟ್ಟಣದ ಸುತ್ತಮುತ್ತ ಕಾರ್ಖಾನೆಗಳು ಹೊರ ಸೋಸುವ ಹೋಗೆ ಮತ್ತು ಧೂಳು ವಾಯು ಮಾಲಿನ್ಯದಿಂದ ಪ್ರತಿ ಮನೆಗೆ ಹೋಗಿ ಸಾರ್ವಜನಿಕರ ಆರೋಗ್ಯದ ಮೇಲೆ6 ಪರಿಣಾಮ ಬೀರುತ್ತಿದೆ. ಅಲ್ಲದೆ ಚಿಕ್ಕ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಅಲರ್ಜಿ ಉಂಟಾಗುತ್ತಿದೆ.

ಜನರು ಸೇವಿಸುವ ನೀರಿನಲ್ಲಿ ಧೂಳು ಮಿಶ್ರಣ ವಾಗಿ ಜನರ ಜೀವಕ್ಕೆ ಕುತ್ತು ಬರುತ್ತಿದೆ. ಈಗಾಗಲೇ ಪಟ್ಟಣದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಅನೇಕ ಜನರು ಚಿಕಿತ್ಸೆಯ ಒಳಗಾಗಿದ್ದಾರೆ. ಇನ್ನೂ ಕೆಲ ಜನ ಸಾವನ್ನಪ್ಪಿದ್ದಾರೆ. ಕಾರ್ಖಾನೆಗಳಿಂದ ಇಂತಹ ಸಮಸ್ಯೆಗಳು ಆಗುತ್ತಿದರು ಜಿಲ್ಲಾಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಕಾರ್ಖಾನೆಗಳ ಕೈಗೊಂಬೆ ಆಗಿದ್ದಾರೆ. ಡುತಿನಿ ಸುತ್ತಮುತ್ತ ಇರುವ 6 ಕಾರ್ಖಾನೆಗಳ ಕುಟುಂಬ ಸಾಗಿಸುವುದಕ್ಕೆ 6033 ಕುಟುಂಬಗಳನ್ನು ಬೀದಿಪಾಲು ಮಾಡುತ್ತಿದ್ದಾರೆ ತಕ್ಷಣ ಕಾರ್ಖಾನೆಗಳ ನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ವಿ. ರಾಜಶೇಖರ್, ಪಪಂ ಸದಸ್ಯ ವೆಂಕಟರಾಮಣಬಾಬು ಸೇರಿದಂತೆ  ಪಟ್ಟಣದ ಮುಖಂಡರು ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಇದ್ದರು.

Leave A Reply