ಕಾಫಿನಾಡಲ್ಲಿ ಸಿಕ್ಕಿರುವ ಹೆಬ್ಬಾವು  ಮನುಷ್ಯನನ್ನು ನುಂಗುತಿತ್ತು…?

0

ಚಿಕ್ಕಮಗಳೂರು  – ಇಷ್ಟು ದೊಡ್ಡ ಹೆವ್ವಾವನ್ನು ನಾನು ನನ್ನ ಜೀವಮಾನದಲ್ಲಿ ನೋಡಿಲ್ಲಾ, ಸುಮಾರು ಇಪ್ಪತ್ತು ವರ್ಷಗಳಲ್ಲಿ ಇಷ್ಟು ದೊಡ್ಡ ಹಾವು ನೋಡಿದ್ದು ಇದೇ ಮೊದಲು ಎನ್ನುವ ಮೂಲಕ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಸೆರೆ ಸಿಕ್ಕ ಹೆಬ್ಬಾವಿನ ಬಗ್ಗೆ, ಉರಗ ತಜ್ಞ ಹರೀಂದ್ರ ಆಡಿದ ಮಾತುಗಳಿವು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೋಲಾಪುರ ಗ್ರಾಮದ ಉಮೇಶ್ ಬಟ್ ಎಂಬುವವರು ತೋಟದಲ್ಲಿ ಈ ಹೆಬ್ಬಾವು ಸೆರೆ ಸಿಕ್ಕಿದೆ. ಈ ಹೆಬ್ಬಾವಿ‌ ಗಾತ್ರ ಬರೊಬ್ಬರಿ 18 ಅಡಿ ಉದ್ದ ಹಾಗೂ ಸುಮಾರು 100 ಕೆಜಿ ಆಸುಪಾಸಿನಲ್ಲಿ ಇದೆ. ಇಷ್ಟು ದೊಡ್ಡದ ಗಾತ್ರದ ಹಾವು ಸೆರೆ ಹಿಡಿದಿದ್ದು ಇದೇ ಮೊದಲು ಎನ್ನುತ್ತಾರೆ, ಉರಗ ತಜ್ಞ ಹರೀಂದ್ರ ಅವರು. 

ತೋಟದ ಮಾಲೀಕರಾ ಉಮೇಶ್ ಬಟ್ ಎಂಬುವವರ ತೋಟದಲ್ಲಿ ಕ್ಲೀನ್ ಮಾಡುವಾಗ ಕೆಲಸಗಾರರಿಗೆ ಈ ಹಾವು ಪ್ರತ್ಯಕ್ಷವಾಗಿದೆ. ಗಾಬರಿಗೊಂಡ ಕೆಲಸ ಗಾರರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ‌ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅವರು ಹೆಬ್ಬಾವು ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟುಬಂದಿದ್ದಾರೆ.

ಇನ್ನು ಈ ಕುರಿತು ಮಾಹಿತಿ ನೀಡಿರುವ ಹರೀಂದ್ರ ಅವರು ಮಾಹಿತಿ ಹಂಚಿಕೊಂಡಿದ್ದು, ಈ ಹೆಬ್ಬಾವು ಒಬ್ಬ ಮನುಷ್ಯನನ್ನು ಸಲಿಸಾಗಿ ನುಂಗುವ ಸಾಮರ್ಥ್ಯ ಹೊಂದಿದೆ, ಆದ್ರೆ ಕಳೆದ ಹಲವಾರು ದಿನಗಳಿಂದ ಆಹಾರ ಸಿಗದ ಕಾರಣ ಕೊಂಚ ನಿತ್ರಾಣವಾಗಿದೆ. ಹೀಗಾಗಿ ಈ ಹಾವು ಹಿಡಿಯಲು ನಮಗೆ ಸಾದ್ಯವಾಗಿದೆ. ಇಲ್ಲದೇ ಇದ್ದರೆ ಇದನ್ನು ಸೆರೆ ಹಿಡಿಯುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply